*ಕನ್ನಡ ಕಸ್ತೂರಿ*
ಕನ್ನಡ ಎಂಬುದು ಕಸ್ತೂರಿ
ಊದಿದರು ಹಲವರು ಆ ತುತ್ತೂರಿ
ಪಂಪ ರನ್ನ ಜನ್ನ ಪೊನ್ನ
ಕನ್ನಡದ ಬೀಜವ ಬಿತ್ತಿದರು
ಹರಿಹರ ರಾಘವಾಂಕರದಕ್ಕೆ
ನೀರು ಗೊಬ್ಬರವನೆರೆದರು
ನೃಪ ತುಂಗ ತೋರಿದ
ಕನ್ನಡದ ರಾಜ ಮಾರ್ಗ
ಕಾವೇರಿಯಿಂದ ನರ್ಮದೆಯ
ಮಡಿಲಾಗಿತ್ತು ಕನ್ನಡದ ಸ್ವರ್ಗ
ವಚನಕಾರರ ಮಾತಲಿ
ಉಲಿದು ಮೆರೆಯಿತು ಕನ್ನಡ
ದಾಸ ಶ್ರೇಷ್ಠರ ಕೀರ್ತನೆಯಾಗಿ
ಜನರ ಭಕ್ತಿಯಾಗಿ ಒಲಿದಿತ್ತು ಕನ್ನಡ
ಸರ್ವಜ್ಞನ ತ್ರಿಪದಿಯಾಗಿ
ಶಿಶುನಾಳರ ತತ್ವಪದ ವಾಗಿ
ಜನಪದರ ಅನುಭವವಾಗಿ
ಮೆರೆದಿತ್ತು ರಾಜ ಕನ್ನಡ
ನವ್ಯ ನವೋದಯ ಬಂಡಾಯ
ದಲಿತ ಸ್ತ್ರೀ ಸಂವೇದಿಯಾಗಿ
ಆಧುನಿಕತೆಯ ಹೋರಾಟದಲ್ಲಿ
ಉಳಿದು ಆಳುತಿದೆ ಕನ್ನಡ
ರಾಜ ಮಹಾರಾಜರ ಆಶ್ರಯದಲ್ಲಿ
ಕಲೆ ಸಾಹಿತ್ಯ ಸಂಸ್ಕೃತಿಯಲ್ಲಿ
ಧರ್ಮ ಆಚಾರ ವಿಚಾರಗಳಲ್ಲಿ
ಎರಡು ಸಾವಿರ ವರ್ಷ ಕ್ರಮಿಸಿದ್ದು ಕನ್ನಡ
ಕನ್ನಡವೆಂಬುದು ಕರುನಾಡ ಘನತೆ
ಕನ್ನಡವ ಕಾಯ್ವಳು ಭುವನೇಶ್ವರಿ ಮಾತೆ
ಕನ್ನಡಕ್ಕಾಗಿ ಎತ್ತಿದ ಕೈಯೊಳಗೆ
ಮಾರ್ದನಿಸುವುದು ಕಹಳೆ ದನಿಯಾಗಿ
0543ಎಎಂ31102018
*ಅಮು ಭಾವಜೀವಿ*
ಚಿತ್ರದುರ್ಗ
No comments:
Post a Comment