*ಈ ಕವಿತೆ*
ಎದೆಯ ಭಾವದಲ್ಲಿ
ಬಿರಿದ ಕಲ್ಪನೆಯಲ್ಲಿ
ಮೂಡಿಬಂತು ಕವಿತೆ
ಕಣ್ಣ ಭಾಷೆಯಲ್ಲಿ
ಮನದ ಆಸೆಯಲಿ
ಹೂವು ಅರಳಿದಂತೆ
ನೋವುಗಳನ್ನೆಲ್ಲ ಸಹಿಸಿ
ಖುಷಿ ಅನುಭವಿಸಿ
ಬರೆದ ಸಾಲು ಈ ಕವಿತೆ
ಕಂಡ ಶೋಷಣೆಯ
ಬಂದ ದೂಷಣೆಯ
ದಾಖಲಿಸಿದ್ದು ಈ ಕವಿತೆ
ಯಾರದೋ ಹಂಗಿನಲ್ಲಿ
ಯಾವುದೋ ಗುಂಗಿನಲ್ಲಿ
ಹುಟ್ಟಿದುದಲ್ಲ ಈ ಕವಿತೆ
ನನ್ನೊಳಗೆ ನೆರಳಾಗಿ
ನೊಂದವರ ಕೋರಲಾಗಿ
ಧ್ವನಿಯೆತ್ತಿತು ಈ ಕವಿತೆ
ಸೋತ ಜೀವದ ಭರವಸೆಯಾಗಿ
ಬದುಕುವಾಸೆಗೆ ಒತ್ತಾಸೆಯಾಗಿ
ಹುಟ್ಟಿತು ಈ ಕವಿತೆ
ಮತ್ತೆ ಮತ್ತೆ ನೆನಪಾಗಿ
ಬತ್ತಿದೆದೆಯ ಸ್ಪೂರ್ತಿಯಾಗಿ
ಬೆಳೆದುಬಂತು ಬಾಳ ಕವಿತೆ
0631ಎಎಂ24042018
ಅಮು ಭಾವಜೀವಿ
No comments:
Post a Comment