*ನೀ ಬಂದರೆ ಸಾಕು*
ನೀನಿರದ ಈ ಬಾಳು ಒಂದು ಗೋಳು
ಚಂದಿರನಿಲ್ಲದ ಬರಿಯ ಇರುಳು
ನೀ ಸಿಗದೆ ನನಗೆ ಇನ್ನೆಲ್ಲಿದೆ
ನೆಮ್ಮದಿಯ ಆ ಬಾಳು
ಮೋಡವಿಲ್ಲದ ಬಾನು
ಗೆಳತಿ ನೀನಿಲ್ಲದ ನಾನು
ವಿರಹದುರಿ ತಾಪಕ್ಕೆ ನಾ
ಕರಗಿಹೋಗಿಹೆನು
ಒಲವಿನ ಕೆರೆಯೊಳಗೆ ನಾ
ತಾವರೆ ಇಲ್ಲದ ಬರಿ ಬೋಳು
ಅಕ್ಕರೆಯ ಹಸಿರಿಲ್ಲದೆ
ಆಸರೆಗಾಗಿ ಹಲುಬಿದೆ ಕೊರಳು
ಬದುಕಿರುವಷ್ಟು ದಿವಸ
ನನಗಿರಬೇಕಿತ್ತು ಸಂತಸ
ನೀ ತಂದ ಈ ವಿರಸ
ಜೀವನವನೆ ಕೊಲ್ಲುವ ವಿಷ
ಎಲ್ಲಿದ್ದರೂ ನೀ ಬಂದರೆ ಸಾಕು
ಅದು ನನ್ನ ಪಾಲಿಗೆ ಬೆಳಕು
ಕಣ್ಣುಗಳು ಹುಡುಕುತ್ತಿವೆ ನಿನ್ನ
ಹತ್ತಿರ ಬಂದು ಬಿಡು ಓ ಚಿನ್ನ
೦೨೧೬ಪಿಎಂ೦೧೦೪೨೦೧೪
*ಅಮು ಭಾವಜೀವಿ*
No comments:
Post a Comment