ಈ ಬದುಕು ಸೋಲುಗಳು ಒಟ್ಟು ಮೊತ್ತ. ನಮ್ಮ ಜೀವನದ ಪ್ರತಿ ಹಂತದಲ್ಲೂ ನಾವು ಸೋಲುತ್ತಾ ಅದರಿಂದ ಅನುಭವಗಳ ಮಹಾ ಮೂಟೆಯನ್ನು ಕಟ್ಟಿಕೊಂಡು ಅದನ್ನೇ ಜೀವನದ ಸಾರ್ಥಕತೆ ಎಂದುಕೊಂಡು ಬೀಗುತ್ತೇವೆ. ಆದರೆ ಬಾಗಿ ಬದುಕಬೇಕಾದದನ್ನು ಮರೆತುಬಿಡುತ್ತೇವೆ. ಪ್ರತಿ ಹೆಜ್ಜೆಯೂ ಸೋಲಿನಿಂದಲೇ ಪ್ರಾರಂಭವಾಗುತ್ತದೆ. ಮಗು ನಡೆಯುವುದನ್ನು ಕಲಿಯಬೇಕಾದರೆ ನೂರಾರು ಬಾರಿ ಬಿದ್ದು ಎದ್ದು ಸೋತು ಸೋತು ಕೊನೆಗೆ ಒಂದು ದಿನ ಎದ್ದು ನಿಲ್ಲುತ್ತದೆ. ನಿಂತ ಮೇಲೆ ನಡೆಯುತ್ತದೆ. ಆಗಲು ನೂರಾರು ಬಾರಿ ಬಿದ್ದು ಏಳುತ್ತದೆ, ನಂತರ ಓಡುತ್ತದೆ, ಆದರೂ ಹತ್ತಾರು ಬಾರಿ ಬಿದ್ದು ಕೈಕಾಲುಗಳನ್ನು ತರಚಿಕೊಂಡು ಮತ್ತೆ ಹಂಬಲದಲ್ಲಿ ಮುಂದೆ ಮುಂದೆ ಓಡುವುದನ್ನು ಕಲಿಯುತ್ತದೆ . ಹಾಗೆ ಬದುಕು ಕೂಡ ಬಿದ್ದು ಎದ್ದು ನೋವನುಂಡು ನಲಿವ ಕಂಡು ಕೊನೆಗೊಮ್ಮೆ ಜೀವನ ಸಾರ್ಥಕತೆಯ ಸೋಲನ್ನೇ ಗೆಲುವೆಂದುಕೊಂಡು ಬಾಳುತ್ತೇವೆ.
ಈ ಜೀವನ ಎಂದು ನಮ್ಮನ್ನು ಗೆಲ್ಲಲು ಬಿಡುವುದಿಲ್ಲ. ಪ್ರತಿ ಹಂತದಲ್ಲೂ ಹೋರಾಡಬೇಕು. ಅದಕ್ಕೆ ತೀವ್ರ ಪ್ರತಿರೋಧ ಒಡ್ಡಿ ನಮ್ಮನ್ನು ಕಾಲಕಾಲಕ್ಕೆ ಹಣಿಯುತ್ತದೆ. ನಾವು ಮಣಿ ಯುತ್ತಲೇ ಮತ್ತೊಂದು ಭಾರಿ ಹೊಡೆತಕ್ಕೆ ಸಜ್ಜಾಗಿ ಮುನ್ನುಗ್ಗಬೇಕು. ಇಲ್ಲಿ ಯಾರೂ ಕಷ್ಟಗಳಿಲ್ಲದೆ ಗೆದ್ದು ಬಂದವರಿಲ್ಲ. ಪ್ರತಿಯೊಬ್ಬರೂ ತಮ್ಮ ತಮ್ಮ ಕ್ಷೇತ್ರದಲ್ಲಿ ಕಷ್ಟ ನೋವು ಅವಮಾನ ಎಲ್ಲವನ್ನು ಸಹಿಸಿ ಬೆಳೆದು ಬಂದಿರುತ್ತಾರೆ. ಆದರೆ ನಾವು ಗೆದ್ದವರನ್ನು ನೋಡಿ ಅವರಂತೆ ಆಗಬೇಕೆಂದು ಬಯಸುತ್ತೇವೆ. ಆದರೆ ಅವನೆಂತಹ ಕಷ್ಟಗಳನ್ನು ಅನುಭವಿಸಿ ಈ ಮಟ್ಟಕ್ಕೆ ಬಂದಿದ್ದಾನೆಂದು ಅರ್ಥ ಮಾಡಿಕೊಳ್ಳದೆ ಎಡವಿ ಬಿದ್ದು ಸೋಲುಗಳಲ್ಲಿಯೇ ಅಳಿದು ಹೋಗುತ್ತೇವೆ. ತನ್ನಿಂದ ಗೆಲುವು ಅಸಾಧ್ಯವೆಂದು ಕೈ ಚೆಲ್ಲಿ ಕೂತು ಬಿಡುತ್ತೇವೆ.
ಪ್ರತಿಯೊಂದು ಜೀವಿ ಈ ಭೂಮಿಯ ಮೇಲೆ ತಾನು ಗೆದ್ದೇ ಗೆಲ್ಲುವೆ ಎಂಬ ಆತ್ಮವಿಶ್ವಾಸದಿಂದಲೇ ಜೀವಿಸುತ್ತಿರುತ್ತವೆ. ಅದಕ್ಕೆ ಅಡ್ಡಿಯಾಗುವ ಅಡೆತಡೆಗಳನ್ನು ತನ್ನ ವ್ಯಾಪ್ತಿಯಲ್ಲಿ , ಇತರರ ಸಹಾಯದಿಂದ, ನಿರಂತರ ಪ್ರಯತ್ನ ಪಡುತ್ತಿರುತ್ತದೆ. ಇದು ಯಾವುದರಿಂದಲೂ ಪ್ರಯೋಜನವಾಗದಿದ್ದಾಗ ದೇವರು ಎಂಬ ಅಗೋಚರ ಶಕ್ತಿಯ ಮೇಲೆ ನಂಬಿಕೆ ಇಟ್ಟು ಗೆಲ್ಲುವ ಹುಮ್ಮಸ್ಸನ್ನು ಹೆಚ್ಚಿಸಿಕೊಂಡು ಹೋರಾಟಕ್ಕಿಳಿಯುತ್ತದೆ. ಈ ಹೋರಾಟದಲ್ಲಿ ಕೆಲವೊಮ್ಮೆ ಕೆಲವೊಂದು ಜೀವಿಗಳು ತಮ್ಮ ಬದುಕನ್ನು ಕಳೆದುಕೊಳ್ಳುವ, ಅಂತ್ಯವಾಗಿ ಸಿಕೊಳ್ಳುವ ಸಂದರ್ಭ ಬರುತ್ತದೆ. ಆಗ ಅದು ಇನ್ನೊಬ್ಬರಿಗೆ ಪಾಠವಾಗುತ್ತದೆ.
ಸಾಧನೆಯ ಹಾದಿ ಎಂದು ಸುಲಭವಾಗಿ ಇರುವುದಿಲ್ಲ. ಅದರದು ಬಲು ಕಠಿಣವಾದ ದುರ್ಗಮ ಹಾದಿ. ಅಲ್ಲಿ ಕಲ್ಲು, ಮಣ್ಣು, ಮುಳ್ಳು, ಹೂವು, ಹಸಿರು, ಕಂದಕ , ಬೆಂಕಿ, ಪ್ರಪಾತ, ಶಿಖರ ಹೀಗೆ ನಾನು ಸ್ಥಳದಲ್ಲಿ ಸಾಧನೆ ಎಂಬುದು ನಮ್ಮನ್ನು ಪರೀಕ್ಷಿಸಿ ಆದಮೇಲೆಯೇ ನಮ್ಮನ್ನು ಸಾಧಕ ನನ್ನಾಗಿ ಆಯ್ಕೆ ಮಾಡಿಕೊಳ್ಳುತ್ತದೆ. ಸಾಧನೆಯ ಈ ಪಯಣದಲ್ಲಿ ನಾವು ಕೇವಲ ಆಟದ ವಸ್ತುಗಳು ಅಷ್ಟೇ. ಗೆಲುವು ತನ್ನ ಮಾನದಂಡಗಳಲ್ಲಿ ಯಾರು ಯಶಸ್ವಿಯಾಗಿ ದಾಟಿ ಬರುತ್ತಾನೋ ಅವನನ್ನು ಮಾತ್ರ ಗುರುತಿಸಿ ಇಡೀ ಜಗತ್ತಿಗೆ ಪರಿಚಯಿಸುತ್ತದೆ. ಅವನ ಸಾಧನೆಯನ್ನು ಅಜರಾಮರವಾಗಿ ಸಿ ಕಾಪಿಟ್ಟುಕೊಂಡು ಬರುತ್ತದೆ. ಮುಂದೆ ಯಾರೇ ಅಸಾಧ್ಯವೆಂದು ಕೂತಾಗ ಸೋತವನ ಮುಂದೆ ಪ್ರೇರಕ ಶಕ್ತಿಯಾಗಿ ಸಾಧಕನ ಸಾಧನೆಯನ್ನು ತೋರಿಸಿ ಮತ್ತೊಮ್ಮೆ ಮಹೋನ್ನತ ಸಾಧನೆಗೆ ಅವನನ್ನು ಆರಿಸಿಕೊಳ್ಳುತ್ತದೆ.
ಒಂದು ಶಿಲೆ ಅಷ್ಟೊಂದು ಹೊಡೆತಗಳನ್ನು ಸಹಿಸಿಕೊಂಡು ಸುಂದರ ಮೂರ್ತಿಯಾಗಿ ಪೂಜೆಗೆ ಅರ್ಹವಾಗುವಂತೆ, ನಾವು ಕೂಡ ಸತತ ಸೋಲುಗಳ ಹೊಡೆತಗಳಿಗೆ ಅಂಜದೆ ಸಾಧನೆಯ ಗುರಿಯೊಂದನ್ನು ನಂಬಿಕೊಂಡು ಬೀಳುವ ಹೊಡೆತಗಳನ್ನು ಸಹಿಸಿ ಕೊಂಡಾಗಲೇ ನಾವು ಕೂಡ ಪೂಜನೀಯರಾಗಬಹುದು. ಈ ಹೊಡೆತಗಳನ್ನು ಸಹಿಸದೆ ಹಿಮ್ಮೆಟ್ಟಿದ್ದರೆ, ಎಲ್ಲರೂ ನಮ್ಮನ್ನು ತುಳಿದು ಅಳಿದು ಹೋಗುವಂತೆ ಮಾಡುತ್ತದೆ. ನಮ್ಮ ಹೆಜ್ಜೆಯ ಗುರುತು ಸ್ಪಷ್ಟವಾಗಿ ಮೂಡಬೇಕಾದರೆ, ನಾವಿಡುವ ಹೆಜ್ಜೆಯನ್ನು ದೃಢವಾಗಿ ಇಡಬೇಕು. ಸಾಧನೆಯ ಮೈಲಿಗಲ್ಲು ಆಗಬೇಕೆ ವಿನಹ ಸೋಮಾರಿಗಳು ಮಲಗುವ ಕಟ್ಟೆ ಯಾಗಬಾರದು. ಬದುಕು ಬಂದಂತೆ ಸ್ವೀಕರಿಸಿ ಅದರಲ್ಲಿ ನಮ್ಮ ತನವನ್ನು ಆವಿಷ್ಕರಿಸಿ ಸಾಧನೆಯ ಹೆಸರನ್ನು ಅಜರಾಮರವಾಗಿ ಸಬೇಕು. ಹುಟ್ಟು ಸಾವು ಪ್ರತಿ ಜೀವಿಯ ಮುಖ್ಯ ಘಟ್ಟಗಳು. ಹುಟ್ಟು ಯಾವುದೋ ಅವಶ್ಯಕ ಕಾರ್ಯಕ್ಕಾಗಿ ಹಾಗಿದ್ದರೆ, ಆ ಕಾರ್ಯದ ಯಶಸ್ಸು ಸಾವಿನಲ್ಲಿ ಗೋಚರಿಸುತ್ತದೆ. ಹಾಗಾಗಿ ಪ್ರತಿಕ್ಷಣವೂ ನಾವು ಹೋರಾಟದ ಬಳಗದಲ್ಲಿ ಸೆಣಸಲೇಬೇಕು. ಮಣಿ ದು ದಣಿದು ಮತ್ತೆ ಪುಟಿದೆದ್ದು ಗೆದ್ದೇ ಎಂಬ ವಿಜಯ ಪತಾಕೆಯನ್ನು ಹಾರಿಸಿದ ಆಗಲೇ ಸಾರ್ಥಕತೆಯ ಪಟ್ಟ ಆಗುತ್ತದೆ. ಕನ್ನ ಅರ್ಥಕ್ಕೆ ನಮ್ಮ ಸಾಧನೆಯನ್ನು ವ್ಯಾಖ್ಯಾನ ಗೊಳಿಸಿ ಕೊಳ್ಳುತ್ತದೆ. ನಮ್ಮನ್ನು ತನ್ನ ಶಿರದ ಮೇಲೆ ಕೂರಿಸಿಕೊಂಡು ಸಾಗುತ್ತದೆ . ಅಗತ್ಯ ಬಿದ್ದಾಗ ಈ ಪುಟ ತೆರೆದು ಮಾರ್ಗದರ್ಶನ ನೀಡುತ್ತದೆ. ಮತ್ತೊಬ್ಬರನ್ನು ತನ್ನ ಮುಖಪುಟದಲ್ಲಿ ಅಚ್ಚಳಿಯದಂತೆ ದಾಖಲಿಸಿಕೊಳ್ಳುತ್ತದೆ.
ಹೀಗೆ ಹುಟ್ಟಿನಿಂದ ಸಾಯುವವರೆಗಿನ ಬದುಕಿನ ನಿರಂತರ ಪಯಣದಲ್ಲಿ ನಾವುಗಳು ಬಂದ ಎಲ್ಲ ತಿರುವುಗಳನ್ನು ಯಶಸ್ವಿಯಾಗಿ ದಾಟಿಕೊಂಡು ಹೋಗಿ ಜೀವನದಂತ್ಯದಲ್ಲಿ ಸಾಧನೆಯ ಗುರುತು ಪತಾಕೆಯನ್ನು ನೆಟ್ಟು ಅಸ್ತಂಗತ ವಾಗುತ್ತಿವೆ. ಮುಂದೆ ನಮ್ಮವರ ಸಾಧನೆಗೆ ದಾರಿದೀಪವಾಗಿ ಕಂಗೊಳಿಸುತ್ತಿವೆ. ಹೀಗೆ ಬದುಕು ಸಾಧನೆಯ ಮೈಲಿಗಲ್ಲಾಗಿ ಬೇಕೆ ಹೊರತು, ವ್ಯರ್ಥ ಸವೆದ ಕಲ್ಲು ಆಗಬಾರದು. ಈ ನಿಟ್ಟಿನಲ್ಲಿ ಎಲ್ಲರೂ ಬದುಕಿನ ಸಾರ್ಥಕತೆಯ ದಾಖಲೆಗಳನ್ನು ಉಳಿಸಿ ಹೋಗೋಣ.
ಅಮು ಭಾವಜೀವಿ
ಚಿತ್ರದುರ್ಗ
No comments:
Post a Comment