*ಜಡೆ ಕವನ*
ಏಕೆ ಹೀಗೆ ಮೌನವಾದೆ ನೀನು
ನೀನು ಮಾತಾಡದಿರೆ ಕಾಲ ಸರಿಯದು
ಸರಿಯದ ವೇಳೆ ತಳಮಳಗೊಂಡಿದೆ ಮನ
ಮನ ನೊಂದು ಬೆಂದಿಹನು ಗೆಳೆಯ
ಗೆಳೆಯ ನೀನಿಲ್ಲದೆ ನಾನು ಇರಲಿ ಹೇಗೆ
ಹೇಗೆ ಹೇಳಲಿ ಮನದ ಭಾವ
ಭಾವ ನೂರಾಗಿ ಕವನ ಹಾಡಲು
ಹಾಡು ಕೇಳುತ್ತ ಮನ ತಣಿಯಿತು
ತಣಿದ ಹೃದಯ ಕುಣಿಯಿತು
ಕುಣಿವ ವಯಸ್ಸು ಪ್ರೀತಿಯ ಬಯಸಲು
ಬಯಕೆ ಈಡೇರುವ ಕ್ಷಣದಲ್ಲಿ
ಕ್ಷಣ ಕ್ಷಣಕ್ಕೂ ಹೊಸ ಆಲೋಚನೆ ಮೂಡಿ
ಮೂಡಣದಿ ತೂರಿ ಬಂತು ರವಿಕಿರಣ
ಕಿರಣ ಬಾಗಿ ಕಾಮನಬಿಲ್ಲಿನ ರಂಗಾಯ್ತು
ರಂಗು ರಂಗಿನ ಕನಸು ಕಂಗಳಲಿ
ಕಂಗಳ ತೆರೆದು ನೋಡಲು ಖುಷಿಯಾಯ್ತು
ಖುಷಿ ಆ ಕ್ಷಣ ಹಿತ ತಂತು
0310ಪಿಎಂ22062019
ಅಮು ಭಾವಜೀವಿ
No comments:
Post a Comment