Friday, June 21, 2019

ಬೆಳಕು ಮೂಡಲಿಿ*

ಬಿದಿಗೆ ಚಂದ್ರ ಬಂದ ಬಾನಲ್ಲಿ
ಸೇರು ಬಾ ಗೆಳತಿ ನನ್ನ ತೋಳಲ್ಲಿ
ತಾರೆಗಳೊಂದಿಗೆ ಅವ ಬೆರೆತಂತೆ
ಸೇರಿ ನನ್ನೊಳು ಮರೆ ಚಿಂತೆ

ಸೂರ್ಯನು ಜಾರಲು
ಪಡುವಣದ  ಅಂಚಿಗೆ
ನನ್ನೊಳಗೆ ನೀ ಅವಿತು ಬಿಡು
ಮಕರಂದ ಬೇಕು ದುಂಬಿಗೆ

ಈ ಬಾಳ ಕಗ್ಗತ್ತಲೆಗೆ
ನೀನಾಗು ಬೆಳದಿಂಗಳು
ನಿನ್ನೊಂದಿಗೆ ನಾನಿರುವೆ
ಮತ್ತೆ ಮತ್ತೆ ಕಾಡುವಂತೆ ಮುಂಗುರುಳು

ಒಲವಿನ ಈ ದಿಬ್ಬಣ
ಬಯಸಿದೆ ಬಾಹುಬಂಧನ
ಕಟ್ಟೋಣ ಹಸಿರು ತೋರಣ
ವಸಂತದಿ ಸಂತನಾಗದಿರಲಿ ಜೀವನ

ತುಸು ಮೆಲ್ಲ ಬೀಸೋ ತಂಗಾಳಿ
ನೀಡುತ್ತಲಿದೆ ಕಚಗುಳಿ
ಮುಂಜಾನೆಯ ಮಂಜ ಹನಿ
ಈ ಮಿಲನದ ಸಾಕ್ಷಿ ಬರೆವ ಲೇಖನಿ

ಇನ್ನು ವಿರಮಿಸ ಬೇಡ
ಬಾ ಕೂಡು ನನ್ನ ಸಂಗಡ
ದಿಗಂತದಧರಗಳು ಕೆಂಪಾಗಲಿ
ಸಂತೃಪ್ತಿಯ ಬೆಳಕು ಮೂಡಲಿ

0702ಪಿಎಂ23032018

*ಅಮಭಾವಜೀವಿಿ*
   

No comments:

Post a Comment