Friday, June 21, 2019


*ನನ್ನದೇನಿದೆ ತಪ್ಪು*

ಹೆಣ್ಣುಗಂಡುಗಳೆರಡೂ
ಒಂದಾದ ಒಡಲು ನನ್ನದು
ಪ್ರಕೃತಿಯೇ ನೀಡಿದ ಶಾಪ
ತಪ್ಪೇನಿದೆ ನನ್ನದು

ಹೆಣ್ಣಂತೆ ಮನಸ್ಸು
ಗಂಡಂತೆ ಗಡಸು
ಎರಡೂ ಅಲ್ಲದ ವಯಸ್ಸು
ಬದುಕಲ್ಲಿ ನನಗಿಲ್ಲ ಯಶಸ್ಸು

ಸಮಾಜದ ದೃಷ್ಟಿಯಲ್ಲಿ
ನಾನೆಂದು ನಿಕೃಷ್ಟ
ಯಾರಿಗೂ ಹೇಳಿಕೊಳ್ಳಲಾಗದ
ನನ್ನ ಬದುಕಿನ ಸಂಕಷ್ಟ

ಹೆತ್ತವರು ದೂರ ತಳ್ಳಿದರು
ಬಂಧುಗಳು ಅಸಯ್ಯ ಪಟ್ಟರು
ಸ್ನೇಹಿತರ ಜೊತೆ ಸೇರದಾದರು
ನಾನು ಯಾರಿಗೂ ಬೇಡವಾದೆನು

ನನಗೂ ಆಸೆ ಆಕಾಂಕ್ಷೆ ಗಳಿವೆ
ಸಾಧಿಸಲು ನನ್ನಲ್ಲೂ ಕನಸುಗಳಿವೆ
ಆದರೆ ತೋರುವ ಹತ್ತಿರದವರು
ಬೇಕೆನಗೆ ನನ್ನವರೆಂಬುವವರು

ಪ್ರಾಣಿಗಳನ್ನು ಮುದ್ದಿಸುವ ನಿಮಗೆ
ನಾವೇಕೆ ಅದಕ್ಕಿಂತಲೂ ಕೇಳದೆ
ನನಗೂ ಒಂದು ಮನಸ್ಸಿದೆ ಎಂಬುದು
ಮರೆತು ಹೋದಿರಿ ನೀವು ಏಕೆ

ನಮಗೂ ಕೊಡಿ ಅವಕಾಶ
ಗೆದ್ದೇ ಗೆಲ್ಲುವೆವು ಒಂದು ದಿವಸ
ನಮಗೂ ಬದುಕುವ ಹಕ್ಕಿದೆ
ಪಡೆದು ಕೊಳ್ಳುವ ತಾಕತ್ತು ನಮಗಿದೆ

11ಎಎಂ03112016
ಅಮು ಭಾವಜೀವಿ

No comments:

Post a Comment