Saturday, June 22, 2019

ಈ ಬಿಸಿಲಲಿ
ನಿಂತು ನಿನ್ನ ನೆನೆದೆ
ತಂಪಾಗಿಸಿತು

ಈ ಸಂಜೆಯಲಿ
ರಂಗು ಎರಚಿದ ರಶ್ಮಿ
ಚೇತನವಾಯ್ತು

ಈ ಇರುಳಲ್ಲಿ
ಕತ್ತಲ ನಭದಲ್ಲಿ
ತಾರೆ ಮಿಂಚಿತು

ಮುಂಜಾನೆಯಲಿ
ಇಬ್ಬನಿಯ ಒಡಲು
ಉಲ್ಲಾಸ ತಂತು

ಈ ಹಗಲಲ್ಲಿ
ಕಾಲ ಸರಿದಂತೆ ಆ
ಸಂಜೆ ತಾ ಬಂತು

ಈ ತಿರುಗಣಿ
ಬದುಕಿನಲ್ಲಿ ಪ್ರೀತಿ
ಅಚಲವಾಯ್ತು

ಅಮು ಭಾವಜೀವಿ

No comments:

Post a Comment