Saturday, June 22, 2019

ನೀನೇ ಇಲ್ಲದಿರುವಾಗ
ನನಗೇನಿದೆ ಇಲ್ಲಿ
ಅಮಾವಾಸ್ಯೆಯ ಕಗ್ಗತ್ತಲು
ಕವಿದ ಈ ಬಾಳಿನಲ್ಲಿ

ನೀನೊಂದು ಭರವಸೆ
ನೀನಿಲ್ಲದ ನಾನು ಒಂದು ತಮಾಷೆ
ಕಲ್ಲನ್ನು ಕಡೆದು ಶಿಲ್ಪಿಯಾಗಿ
ನಿತ್ಯ ಪೂಜಿಸಿಕೊಳ್ಳುತ್ತಿರುವೆ ಮೂರ್ತಿಯಾಗಿ

ನೀ ತಿದ್ದಿ ತೀಡಿದ ರೂಪಕ್ಕೆ
ಸುತ್ತಮುತ್ತೆಲ್ಲ ಮನ್ನಣೆ
ನಾ ಬಯಸದೆ ನೀ ಬಂದಿದ್ದರು
ನನ್ನ ಬದುಕಿಗೀಗ ನೀನೇ ಆಕರ್ಷಣೆ

ನಾನು ಅಡ್ಡಾದಿಡ್ಡಿ ಅಲೆಯುವಾಗ
ನೀನು ಬೆರಳ ನೀಡಿ ದುರುಳತನ ದೂಡಿದೆ
ಪಲ್ಲಕ್ಕಿ ಮೆರವಣಿಗೆಯಲ್ಲಿ ಮೆರೆವಾಗ
ಹೊಗಳಿಕೆಯ ಮಾತೆಲ್ಲ ನಿನ್ನ ಕೊಂಡಾಡಿದೆ

ನಾನೀಗ ಏನಾಗಿದ್ದರೂ
ನಿನ್ನಿರುವವ ಹಾಜರಿಯಿಂದಲೇ
ನಾನು ಎಷ್ಟೇ ಏರಿ ಕುಳಿತರು
ನನ್ನೊಡನೆ ನೀನಿರುವ ಖಾತರಿಯಿಂದಲೇ

*ಅಮು ಭಾವಜೀವಿ*

No comments:

Post a Comment