Saturday, June 22, 2019

*ಕೋಮಲ ಮೊಗದಲ್ಲಿ*

ಪುಟ್ಟ ಪುಟ್ಟ ಹೆಜ್ಜೆ
ಇಡುತ ಬರುವ ಬಾಲೆ
ನಿನ್ನ ಪಾದ ಸ್ಪರ್ಷಕ್ಕಾಗಿ
ಓಡಿ ಬರುತ್ತಿವೆ ಅಲೆ

ನಿನ್ನ ಕಿಲಕಿಲ ದನಿಯ ಕೇಳಿ
ಸಾಗರವು ಕೂಡ ಸಂಭ್ರಮಿಸುತ್ತಿದೆ
ನಿನ್ನ ಮುಗ್ದ ನಗುವಿನಲ್ಲಿ
ಸ್ನಿಗ್ಧ ಚೆಲುವು ಅನಾವರಣಗೊಂಡಿದೆ

ನಿನ್ನ ಕೋಮಲ ಮೊಗದಲ್ಲಿ
ಚೆಲುವಿನ ಹೂ ಅರಳಿವೆ
ಸುಮದ ರಾಶಿಯನ್ನೇ ತೊಟ್ಟ ನಿನ್ನ
ಮುದ್ದಿಸಿ ತೆರೆಗಳು ಮರಳಿವೆ

ಹುಣ್ಣಿಮೆಯ ಚಂದಿರನಂತಹ
ನೀನು ಈ ತೀರಕೊಂದು ಮೆರಗು
ಎಲ್ಲ ನೋವು ಮರೆಸಿತಲ್ಲೆ
ಪುಟಾಣಿ ನಿನ್ನ ಈ ಸೊಬಗು

ಭಯವೇಕೆ ಅಮ್ಮನಿರಲು
ಸಲಿಲ ನಿನ್ನ ಜೊತೆಗಾತಿ
ಜಗದ ಎಲ್ಲ ನೋವು ಮರೆಸಿತು
ಕಂದ ನೀನೆಂದು ಬದುಕ ಸ್ಫೂರ್ತಿ

0711ಪಿಎಂ05052018

*ಅಮು ಭಾವಜೀವಿ*

No comments:

Post a Comment