ಬಡತನದ ಬೇಗೆಯಲಿ
ಬೆಂದ ಈ ಬದುಕು
ಹುಚ್ಚು ಹರೆಯ ತಂದ
ಈ ಎಲ್ಲಾ ಕೆಡುಕು
ಬೀದಿಯ ಕಣ್ಣುಗಳೆಲ್ಲ
ಕುಕ್ಕಿ ಕುಕ್ಕಿ ತಿನ್ನುತ್ತಿವೆ
ಮಂಚದ ಮೇಲಿನ ರಣಹದ್ದುಗಳೆಲ್ಲ
ಕಚ್ಚಿ ಕಚ್ಚಿ ಘಾಸಿಗೊಳಿಸುತ್ತಿವೆ
ಅವರು ಎಸೆವ ಬಿಡಿಗಾಸಿಗಾಗಿ
ನನ್ನ ತನವ ಅಡವಿಡಬೇಕಿದೆ
ನನ್ನೆಲ್ಲಾ ಆಸೆಗಳನ್ನು ಅವರ
ಪಲ್ಲಂಗದಡಿ ಹಾಸಬೇಕಿದೆ
ಹಸಿದ ನಾಯಿಗೂ ಕನಿಕರವುಂಟು
ಎಸೆವವರೆಗೂ ಕಾಯುವುದು
ಈ ಕಾಮುಕರ ಪೈಶಾಚಿಕತೆಗೆ
ನೊಂದು ನರಳಿದೆ ಬದುಕು
ಮೈಯನೆಲೆಲ್ಲ ತಿಂದರೂ
ಮನಸಲ್ಲೇ ಕೊಂದರು
ತೊಗಲ ಸುಖದ ತೆವಲಿಗಾಗಿ
ಸಂಸಾರಕ್ಕೆ ಹೆಗಲಾಗುವುದ ಮರೆತರು
ಇಷ್ಟೇ ನಮ್ಮ ಬದುಕು
ಹರೆಯ ತೀರಿದ ಮೇಲೆ
ಕಾಯಿಲೆಯ ಬಾಣಲಿಯಲ್ಲಿ ಬಿದ್ದು
ನಿತ್ಯ ಒದ್ದಾಡಿ ಸಾಯಬೇಕು
0613ಪಿಎಂ17032018
*ಅಮು ಭಾವಜೀವಿ*
No comments:
Post a Comment