Saturday, June 22, 2019

ಸಂಜೆಯಿದು ಜಾರುತಿದೆ
ಏಕಾಂತ ಕಾಯುತಿದೆ
ಬಂದು ಬಿಡು ಬೇಗ ನೀನು
ನೀಲಾಗಸ ಕಪ್ಪಾಗುತಿದೆ
ಒಂಟಿತನ ಕಾಡುತಿದೆ
ಬಂದು ಸೇರು ಮರೆಯದೆ ನನ್ನನು

ಇರುಳು ಕವಿಯುವ ಮೊದಲು
ಬಾನ ರಂಗು ಮಾಸುತಿರಲು
ಆತಂಕವಿದು ಅಧಿಕವಾಗುತಿದೆ
ಬೆರಳು ತೀಡಿದ ವೀಣೆ
ಉಲಿವ ರಾಗವು ನಿನ್ನದೇನೇ
ತವಕ ಬದುಕ ತಲೊಲಣಿಸಿದೆ

ತಂಪು ತಂಗಾಳಿಯೊಂದಿಗೆ
ಬೆಳದಿಂಗಳು ಬೆರೆತಂತೆ
ನಾವೊಂದಾಗೋಣ ಬಾ
ನಶೆಯಿದು ಕಳೆದುಹೋಗಿ
ಉಷೆ ಮೂಡುವ ಸಮಯಕ್ಕೆ
ಇಬ್ಬನಿಯ ಹನಿಗಳಲಿ ಮೀಯೋಣ ಬಾ

0634ಪಿಎಂ19062019

*ಅಮು ಭಾವಜೀವಿ*

No comments:

Post a Comment