Saturday, June 22, 2019

*ಕೋರಿತು ಸ್ವಾಗತ*

ಮೂಡಣದ ಮನೆಯಿಂದ
ಮಗುವಾಗಿ ಹುಟ್ಟಿಬಂದ
ಜಗಕೆ ಬೆಳಕ ತಂದ
ದಣಿವರಿಯದ ನೇಸರ

ನೀಲ ಬಾನಿನ ತುಂಬ
ಪ್ರಖರ ಕಿರಣದ ಹಾವಳಿ
ಸೂರ್ಯ ಬರಲು ಮೆಲ್ಲ ಮರೆಯಾಯಿತುು ಆ ರವಳಿ

ಮುಂಜಾನೆಯ ಮುಸುಕು ಸರಿಸಿ
ಮಂಜಿನಹನಿ ಕೋರಿತು ಸ್ವಾಗತ
ಮಲಗಿರುವ ಜಗವ ಎಬ್ಬಿಸಿ
ಪುಳಕಿತಗೊಳಿಸಿತು ಸುಪ್ರಭಾತ

ಅರಳಿರುವ ಸುಮದೊಳಗೆ
ಭೃಂಗಗಳ ಮಿಲನೋತ್ಸವ
ವಸಂತನಿರುವ ನಿಸರ್ಗದೊಳಗೆ
ಪ್ರತಿಕ್ಷಣವೂ ನಿತ್ಯೋತ್ಸವ

ಹರಿವ ಸಲಿಲದ ಸಂಭ್ರಮ
ಸಾಗರದಲೆಯಲಿ ಉಕ್ಕಿದೆ ಪ್ರೇಮಾ
ಭೂರಮೆಗೆ ಭಾನುವಿನ ಈ ಸ್ಪರ್ಶ
ಎಲ್ಲೆಲ್ಲೂ ಮನೆ ಮಾಡಿದೆ ಹರ್ಷ

ಮುಂಜಾನೆ ಇದು ಜಗದ ಮೊಗ್ಗು
ಅದನ್ನು ಸವಿದಾಗಲೇ ಮನಕೆ ಹಿಗ್ಗು
ಬಾ ರಸಿಕ ಸವಿ ನೀನಿದನು
ರವಿಯ ಕಂಡು ಕವಿ ಬರೆದಿಹೆನು

0658ಎಎಂ06042018

*ಅಮ ಭಾವಜೀವಿಿ*
   

No comments:

Post a Comment