Saturday, June 22, 2019

ನೀನು ಭಾವ ನಾನು ಅಕ್ಷರ
ನಾವಿಬ್ಬರೂ ಇಲ್ಲದಿರೆ ಬಾಳು ನಶ್ವರ
ನೀ ಹೊಮ್ಮಬೇಕು ನಾ ಚಿಮ್ಮಬೇಕು
ಪ್ರೇಮಗೀತೆಯೊಳಗೆ ನಾವು ಹಾಡಾಗಬೇಕು

ಛಂದ ಛಂದಸ್ಸು ಸಂಧಿಗೊಂದಿಗಳ
ಹಂಗು ನಮಗೇಕೆ ಹೇಳು
ಉಪಮೆ ರೂಪಕಗಳ ಅಮಲೇರಿ ಹೊರಳಾಡಲು ಹಸಿರಾಗುವುದು ಬೀಳು

ಯೌವನದ ವಿರಹ ವೇದನೆಯಲ್ಲಿ ಒಲವಿನ ಸುಳಿಗಾಳಿಯ ಭರವಸೆ
ಗಂಡು-ಹೆಣ್ಣು ಕೂಡಿ
ಲಗ್ನವಾಗಲದುವೇ ಹಸೆ

ಪ್ರೇಮ ಕಾಮ ಎಲ್ಲ ತೂರಿ ಗಾಳಿಗೆ
ನಿನಗೆ ನಾನು ನನಗೆ ನೀನು ಸಾಕು ಬಾಳಿಗೆ
ನನ್ನ ನಿನ್ನ ಮಿಲನ ಸಾಕ್ಷಿಗೆ
ಚಂದನವ ತೇಯ್ದ ರೂಪ ಕೂಸಿಗೆ

ಯಾರ ಹಂಗೂ ಯಾವ ಗುಂಗು
ಬೇಡ ನಮ್ಮ ಪ್ರೀತಿಗೆ
ನೀನು ಬಡವಿ ನಾನು ಬಡವ
ಒಲವೊಂದೇ ಸಾಕು ನಮ್ಮ ಖುಷಿಗೆ
11102014
*ಅಮು ಭಾವಜೀವಿ*

No comments:

Post a Comment