ಬಂದೆಯಾ ನಲ್ಲೆ
ನನ್ನೆದೆಯ ಗೂಡಿನ ಒಳಗೆ
ಒಲವಿನ ಹಣತೆಯ ಹಚ್ಚಿ
ನಗುವಿನ ಬೆಳಕು ಹರಿಸಲು
ಬಂದೆಯಾ ನಲ್ಲೆ
ಒರಟಾದ ಕಾರ್ಗಲ್ಲನು
ಸಹನೆಯ ಉಳಿಯಿಂದ ಕೆತ್ತಿ
ನನ್ನ ಶಿಲ್ಪವಾಗಿ ರೂಪಿಸಲು
ಬಂದೆಯಾ ನಲ್ಲೆ
ನನ್ನವರೆಂಬ ಎಲ್ಲರೂ ನನ್ನ
ಅಪಹಾಸ್ಯದ ಕೋಪಕ್ಕೆ ತಳ್ಳಿದಾಗ
ಫೀನಿಕ್ಸ್ ನಂತೆ ಮತ್ತೆ ಪುಟಿದೇಳಿಸಲು
ಬಂದೆಯಾ ನಲ್ಲಿ
ನೋವುಗಳನೇ ಉಂಡು
ಬರಿದಾದ ಬೀಳು ನೆಲಕೆ
ಭರವಸೆಯ ಸೋನೆ ಮಳೆಯಾಗಿ
ಬಂದೆಯಾ ನಲ್ಲೆ
ಸಣ್ಣ ಕಣದೊಳಗು
ಸಿಡಿವ ಪರಮಾಣು ಇದೆಯೆಂದು ತೋರಲು ಬಾಳಿಗೆ ವಿಜ್ಞಾನಿಯಾಗಿ
*ಅಮುಭಾವಜೀವಿ*
No comments:
Post a Comment