Friday, June 21, 2019

ಕ್ರೂರ ಮಾನವನೇ ನಿನ್ನ
ಘೋರ ಆಸೆಗೆ ನಾ ಬಲಿಯಾದೆ
ನನ್ನನ್ನೇ ನಂಬಿ ಸುಮ್ಮನೆ ಕೂರದೆ
ವಿನಾಶದ ಅಂಚಿಗೆ ತಳ್ಳಿದೆ

ಎಲ್ಲ ಜೀವರಾಶಿಗಳನು ನಾಶಗೈದು
ನೀನೊಬ್ಬನೇ ಬದುಕಲು ಆಸೆ ಪಟ್ಟೆ
ಸಹಬಾಳ್ವೆಯ ಮಹತ್ವವನ್ನು
ತಿಳಿಯದೆ ನೀನೇ ಕೆಟ್ಟೆ

ಬರ ಬಂದಾಗ ನನ್ನನ್ನೇ
ದೂಷಿಸುವ ಮಾತನಾಡಿದೆ
ನರ ನೀನು ಎಲ್ಲದಕ್ಕೂ
ಕಾರಣವಾಗಿ ನರಕವಾಗಿಸಿದೆ

ಗಿಡಮರಗಳ ಕಡಿದು
ಭೂಮಿಯ ಆಗೆದು
ಎಲ್ಲ ಬರಿದು ಮಾಡಿದೆ
ನೀರಿಲ್ಲದೆ ನರಳಾಡಿದೆ

ನನ್ನ ನಿಯಮವನ್ನು ಮೀರಿ
ವರ್ತಿಸಿದೆ ಹದ್ದು ಮೀರಿ
ನನ್ನ ನಿಯಂತ್ರಣ ತಪ್ಪಿ
ಒದ್ದಾಡುತ್ತಲೇ ಇರುವೆ ಸಿಕ್ಕಿ

ಇನ್ನಾದರೂ ಎಚ್ಚೆತ್ತುಕೋ
ಪ್ರಕೃತಿ ರಕ್ಷಣೆಗೆ ನಿಂತುಕೋ
ಮುಂದಿನ ಪೀಳಿಗೆಗಾದರೂ
ಉಳಿದುಕೊಳ್ಳಲಿ ಒಂದಿಷ್ಟಾದರೂ

1017ಎಎಂ11102018

ಅಮು ಭಾವಜೀವಿ
ಮುಸ್ಟೂರು

No comments:

Post a Comment