ಸಂಜೆ ಇದು ಜಾರುತಿದೆ
ಮೆಲ್ಲ ಮೆಲ್ಲನೆ ಗೆಳತಿ
ನೀನಿರದಿರುವುದೇ ನನಗೆ ಭ್ರಾಂತಿ
ಹಕ್ಕಿಗಳು ಮರಳಿದವು
ಗೋವುಗಳು ಹಟ್ಟಿ ಸೇರಿದವು
ನೀನಿರದೆ ನಾನೆಲ್ಲಿ ಇರಲಿ
ನಿನ್ನ ಮಡಿಲಲ್ಲಿ ಮಲಗಿ
ಒಲವ ಮಾತುಗಳಾಡಿ
ಇರುಳ ಕಳೆಯುವಾಸೆ
ತಂಗಾಳಿಯಂತೆ ಮುಂಗುರುಳು ಸೋಕಿ
ಬೆಳದಿಂಗಳಂತೆ ನಗುವನ್ನು ಸೋಸಿ
ನೀನೆನ್ನ ರಮಿಸ ಬೇಕೆಂಬ ಆಸೆ
ತಾರೆಗಳು ಮಿನುಗಿರಲು
ಚಂದಿರನು ಬಂದಿರಲು
ನೀನಿನ್ನು ಎಲ್ಲಿ ಉಳಿದೆ
ಶ್ವಾನಗಳಿಗೆ ಘೀಳಿಡುತಿರಲು
ನರಿಗಳು ಊಳಿಡುತಿರಲು
ಕಂಗಾಲಾಗಿಹೆ ನೀ ಬಳಿಯಿರದೆ
ನನ್ನೆದೆಯು ಕರೆಯುತ್ತಿದೆ
ಮನಸಿದು ಬಯಸುತಿದೆ
ಬಾ ಗೆಳತಿ ಒಲವನ್ನು ನೀಡು
ಮಂಜಂತೆ ಕರಗಿರುವೆ
ಮೊಗ್ಗಾಗಿ ಬಿರಿದಿರುವೆ
ಬಾಳಿಗೆ ಸುಪ್ರಭಾತ ಹಾಡು
ಮರೆತು ನೂರು ಚಿಂತೆ
ಹೊದಿಸು ಕಡಲ ಅಲೆಗಳಂತೆ
ಈ ಬದುಕು ನಿನ್ನ ಸ್ವಂತ
ನೀನು ರವಿಯಂತೆ
ನಾನು ಭೂಮಿಯಂತೆ
ನಾವು ಸೇರುವ ದಿಗಂತ
06 09 ಪಿಎಂ 15 1 2019
ಅಮು ಭಾವಜೀವಿ
No comments:
Post a Comment