ಇನ್ನು ನೀನು ವಿರಮಿಸುವಂತಿಲ್ಲ
ಓ ಆಕಾಶ ಮಲ್ಲಿಗೆ
ನಿನ್ನೊಡನೆ ಸ್ಪರ್ಧೆಗೆ ಇಳಿದಿವೆ
ಹೂವ ಗೊತ್ತಾ ಬೇವು ಹೊಂಗೆ
ನಿನ್ನ ಕಣ್ಣ ಕುಡಿ ನೋಟದ
ಸಂಚಿಗೆ ನಾ ಬಲಿಯಾದೆ
ಭಯವಿಲ್ಲ ನನಗೆ ??
ಒಲವಿನ ಅಲೆ ಉಕ್ಕಿತಲ್ಲಿ
ಮಮತೆಯ ಸೆಲೆ ಹೊಮ್ಮಿತು ಅಲ್ಲಿ
ಬದುಕಿನಿಂದ ನಿರ್ಗಮಿಸುವ ಆಸೆ
ದೂರವೆ ಒಳಿಯಿತು ನನಗಾದರಿಂದ
ಪದಗಳು ನಿನ್ನ ರೂಪ ವಾದವು
ರಾಗಗಳು ನಿನ್ನ ಚೆಲುವ ಹಾಡಿದವು
ಬಣ್ಣಗಳು ನಿನ್ನ ಯೌವನ ತೆರೆದಿಟ್ಟವು
ಆದರೂ ನೀ ಹಿಗ್ಗಲಿಲ್ಲ ಕುಗ್ಗಲಿಲ್ಲ
ಆಕಾಶದ ಮಲ್ಲಿಗೆ ನೀನಾದರು
ನಿನ್ನ ನೋಟ ಮಾತ್ರ ಭೂರಮೆಯತ್ತಲೇ
No comments:
Post a Comment