ತರಗೆಲೆಗೆ ಕಿಡಿ ಸೋಕಿದಂತೆ
ಅವಳಿಲ್ಲದ ಈ ಪಯಣ
ಬರೀ ಬೇಸರದ ತಲ್ಲಣ
ಮಾತು ಮರೆತ ಕೋಗಿಲೆ
ನಾಟ್ಯ ತೊರೆದ ನವಿಲೆ
ಈ ಒಲವ ದಿಬ್ಬಣ
ಇಳಿಸಂಜೆಯ ಗೋಳು
ಈ ಒಂಟಿ ಬಾಳು
ಆ ಕತ್ತಲಲ್ಲಿ ಜಾರುವಾಗ
ಅಮಾವಾಸ್ಯೆಯದು ಬಂದು
ಸಾಗರದದೆ ನೊಂದಿರಲು
ಅಕ್ಕರೆಗೆ ಇನ್ನೆಲ್ಲಿ ಜಾಗ
ಮೂಡುವ ಸೂರ್ಯನೊಳಗೆ
ವಿರಹದ ಒರಿ ಕೆನ್ನಾಲಿಗೆ
ಕರಗಿದೆ ಮಂಜಿನ ಸ್ವಭಾವ
ನಲುಗಿದಾ ನಲುಮೆಗೆ
ಸಾಂತ್ವನದ ಮಾತಿಲ್ಲ
ಎಲ್ಲೆಲ್ಲೂ ಪ್ರೀತಿಯ ಅಭಾವ
ಒಮ್ಮೆಯಾದರೂ ಕಾಣಿಸಿಕೊ
ಗ್ರಹಣ ಬಿಟ್ಟ ಕ್ಷಣದಂತೆ
ಮರೆವೆನಾಗ ನೂರು ಚಿಂತೆ
ಹೇಗಿದ್ದರೂ ಒಮ್ಮೆ ನಕ್ಕು ಬಿಡು
ಕುಣಿವೆ ದಣಿವಿರದಂತೆ
ತಣಿವೆ ರಚ್ಚೆ ಹಿಡಿದ ಮಗುವಿನಂತೆ
05.55 ಪಿಎಂ 26 01 2019
ಅಮು ಭಾವಜೀವಿ!
..
,,
No comments:
Post a Comment