Friday, June 21, 2019

ಇದು ಸಹಜ
ತಿಳಿಯೋ ಓ ಮನುಜ

ಬುಡ ಒಣಗಿದ ಮೇಲೆ
ಸುಡದಿರುವರೇ ಜನ
ಸುಡುವ ಕಿಡಿ ತಾಗಿದರೆ
ನೋಯದಿರುವುದೇ ಮನ

ಹೂ ಅರಳಿ ನಗುತಲಿದ್ದರೆ
ಕೈ ಕೀಳದೆ ಸುಮ್ಮನಿರುವುದೇ
ಮನದೊಳಗಣ ಭಾವನೆಗಳ
ಮೊಗ ತೋರದೇ ಮರೆಮಾಚುವುದೇ

ಅಮಾವಾಸ್ಯೆಯ ದಿನದಂದು ಕಾಣಬಹುದೇ
ಆ ಬೆಳದಿಂಗಳ ಚೆಲುವ
ಬರವಿದ್ದರೂ ವಸಂತ ಬಂದಾಗ
ಚಿಗುರದೆ ಇರುವುದೇ ನಿಸರ್ಗ

ನವ ಮಾಸ ತುಂಬಿದ ಮೇಲೂ
ಗರ್ಭದಲ್ಲೇ ಉಳಿಯುವುದೇ ಭ್ರೂಣ
ಸಾವು ಬಂದು ಕರೆವಾಗ
ದೇಹವನ್ನು ತೊರೆಯದಿರುವುದೇ ಪ್ರಾಣ

ಆರಂಭ ಎಷ್ಟು ಸತ್ಯವೋ
ಅಂತ್ಯವೂ ಕೂಡ ಅಷ್ಟೇ ಸತ್ಯ

*ಅಮ ಭಾವಜೀವಿ*
   

No comments:

Post a Comment