ಜನಿಸಲು ಒಬ್ಬ ತಾಯಿ ಬೇಕು
ಬಾಳಲೊಂದು ನಾಡು ಬೇಕು
ಆ ನಾಡಲಿ ತಾಯಿ ಪ್ರೀತಿ ತುಂಬಿರ ಬೇಕು
ಅಂತ ನಾಡು ಕರುನಾಡೆಂದು ಹೆಮ್ಮೆ ಪಡಬೇಕು
ಸಂಸ್ಕೃತಿಯ ತೋಟದಲ್ಲಿ
ಸಹಬಾಳ್ವೆಯ ಮಡಿಲಿನಲ್ಲಿ
ಜೇನು ಗೂಡು ಕಟ್ಟಿ ನೋಡು
ಈ ಚಂದನದ ಬೀಡಿನಲ್ಲಿ
ಹಸಿರು ವನರಾಶಿಯಲಿ
ಕಡಲ ಜಲರಾಶಿಯಲ್ಲಿ
ಮಿಂದು ಮೈದಳೆದ
ಕನ್ನಡಮ್ಮನ ಪಾದಕೆ ಸುಮವಾಗು
ಸಹ್ಯಾದ್ರಿಯ ರಕ್ಷೆಯಲ್ಲಿ
ಪ್ರೀತಿ ಭಿಕ್ಷೆ ಕೇಳಿದರೆ
ಇಲ್ಲವೆಂಬ ನಾಡಲ್ಲ
ಕನ್ನಡದ ಪ್ರೀತಿ ಕಡಲಿನಂತಹುದು
ಕಾವೇರಿ ತೀರದಲ್ಲಿ
ಸೂರ್ಯ ಘಮ ಘಮ ಚೆಲ್ಲಿ
ಬೇಡಿ ಬಂದವನ ಬಂಧುವೆಂದು
ರಕ್ಷಿಸುವ ಭುವನೇಶ್ವರಿಯ ತವರೂರಿದು
ಕರಾವಳಿ ಅಂಚಿನಲ್ಲಿ
ಕಚಗುಳಿ ಇಡುತ್ತಲಿ
ಯಾತ್ರಿಕನ ಸೆಳೆವ ಚೆಲುವಿದೆ
ಕನ್ನಡದ ಈ ಕಂಪಿನಲಿ
ಕನ್ನಡವೆಂಬ ನಲ್ನುಡಿ
ಕಲಿತ ಮೊದಲ ನುಡಿ
ಬಾಳಿಗೆ ಚೇತನದ ಮುನ್ನುಡಿ
ಕಟ್ಟೋಣ ಬನ್ನಿ ಶ್ರೀ ಗಂಧದ ಗುಡಿ
ಕನ್ನಡದ ತಾಯಿ ಮನೆ
ಅಂಗಿನ ಅರಮನೆಯಲ್ಲ
ಎಲ್ಲರಲೂ ಒಂದಾಗಿ
ಕೂಡಿ ಬಾಳೋಣ ನಾವೆಲ್ಲ
1105ಎಎಂ12052001
*ಅಂತರಂಗದ ಅಭಿಮಾನಿ*
No comments:
Post a Comment