ನಾ ಮರೆಯುವ ಮುನ್ನ
ಕ್ಷಮಿಸಿರುವೆ ನಿನ್ನ ತಪ್ಪನ್ನು
ಪ್ರೀತಿಸು ಎಂದು ಅಂಗಲಾಚಿ
ಮೋಸವ ನೀನಲ್ಲಿ ಮರೆಮಾಚಿ
ಕಾಡಿದೆ ಬೇಡಿದೆ ಕನಿಕರಿಸಿ
ಒಪ್ಪಿದ್ದಕ್ಕೆ ನನಗೆ ಈಗ ಇಂಥ ಶಿಕ್ಷೆ
ನಿನ್ನ ವಶವಾಗಿಸಿಕೊಂಡು
ನನ್ನ ಕೃಶವಾಗಿ ಕೊಂದು
ಬದುಕುವ ಭರವಸೆಯನ್ನು
ಕಿತ್ತೊಗೆದೆ ನನ್ನೊಳ ಇಂದು
ನಿನ್ನ ನಗುವೇ ಪ್ರೀತಿ ಎಂದು ನಂಬಿ ಮನಸ್ಸು ಕೊಟ್ಟು ಕಂಗಾಲಾದೆ
ಮೈಮರೆಸಿ ನನ್ನ ಸೇವಿಸಿ
ಜೀರ್ಣವಾಗದೆ ಬಾಳ ಅಜೀರ್ಣ ಮಾಡಿದೆ
ನಿನ್ನ ಕಪಟಕ್ಕೆ ನನ್ನ ಚಡಪಡಿಕೆ
ಹೊರೆ ಹೊತ್ತು ನೆರವು ಬೇಡಿದೆ
ಎಲ್ಲ ಮರೆತಿರುವೆ ನೀನು ಯಾರು
ಎನ್ನಲು ಕುಸಿದೆ ಇಲ್ಲದೆ ಒಂದು ಸೂರು
ನಾನಂತೂ ಈಗ ತಬ್ಬಲಿ
ನಿನಗೆ ನನ್ನ ಬಾಳಾಗದಿರಲಿ ಬಲಿ
ನಾನು ಮರೆಯುವ ಮುನ್ನ
ಬಂದು ಸೇರುವೆಯಾ ನನ್ನ
ಅಮುಭಾವಜೀವಿ
No comments:
Post a Comment