*ಮನುಷ್ಯತ್ವ ಮರೆತವರು*
ಮಣ್ಣಿನ ಗೋಡೆ ಕಟ್ಟಲು
ಸಂಬಂಧಗಳ ಕಡಿದರು
ಬಿದ್ದುಹೋಗುವಗೋಡೆಗಾಗಿ
ಬಾಂಧವ್ಯಗಳನ್ನೇ ಕೊಂದರು
ನೆರಳು ನೀಡುವವರ ಮುಂದೆಯೇ
ನೆತ್ತರು ಹರಿಸುವ ಮಾತಾಡಿದರು
ಸಹಾಯಕ್ಕೆ ಬಂದವರನ್ನೇ ನೊಂದು ಕೊಂಡು ಹೋಗುವಂತೆ ಮಾಡಿದರು
ಪ್ರತಿಷ್ಠೆಯ ಪರಾಕಾಷ್ಠೆಯಲ್ಲಿ
ಪ್ರಜ್ಞೆ ತಪ್ಪಿ ಮಾತಾಡಿದರು
ಋಣದ ಭಾರವನ್ನು ಹೊತ್ತಿದ್ದರೂ
ಹೆಣ ಬೀಳಿಸುವ ಮಾತಾಡಿದರು
ಅನ್ಯಾಯದ ದಬ್ಬಾಳಿಕೆಯಿಂದ
ನ್ಯಾಯವನ್ನು ಕೊಲ್ಲಲು ಹೊರಟರು
ನದಿಯ ದಾಟಿಯಾದ ಮೇಲೆ
ಅಂಬಿಗನ್ನೇ ಬಿಟ್ಟು ಹೊರಟರು
ಸಮಯ ಸಾಧಕರಿವರು
ಸಂಸ್ಕಾರವನ್ನೇ ಮರೆತವರು
ನೆಮ್ಮದಿಯ ಕದಡಿ ಖುಷಿಪಟ್ಟರು
ಕೊಟ್ಟ ಗೌರವವನೇ ಕಳೆದುಕೊಂಡರು
ದುರುಳಿವರು ದುಷ್ಟರಿವರು
ಸಂಬಂಧಗಳ ಬೆಲೆ ತಿಳಿಯದ
ದ್ವೇಷ ಅಸೂಯೆಗಳ ಬೆನ್ನು ಬಿದ್ದು
ಮನುಷ್ಯ ಪ್ರೀತಿಗಳ ಮರೆತವರು
0235ಪಿಎಂ19032018
*ಅಮುಭಾವಜೀವಿ*
No comments:
Post a Comment