Friday, June 21, 2019

ನಾನು ಬಾಂದಳ ಎಲ್ಲ ಝಳಝಳ
ಸೂರ್ಯ ಬೆಳಕು ತಂದಾಗ
ಆ ಇರುಳ ಕಪ್ಪುಗುರುಳ
ಶಶಿ ತಾರೆ ಹೊಳಪ ಫಳಫಳ

ಹಗಲು ಭರವಸೆ
ಇರುಳು ತಾಮಸೆ
ಎಲ್ಲ ಸಹಿಸಿ ಉಳಿದು
ನೀಲಿಮೆಯ ಒಲುಮೆಯಾದೆ

ಹಗಲಿಗೆ ಸೂರ್ಯನ ರಹದಾರಿ
ಇರುಳು ಶಶಿ ತಾರೆಯರ ಶೃಂಗಾರಿ
ಚಿತ್ತಾರ ಮೇಘಗಳ ಹೊತ್ತ ವೈಯ್ಯಾರಿ
ನಾನೇ ಆಗಸ ಸುಂದರಿ

ಕಣ್ಣು ಹಾಯಿಸಿದಷ್ಟು ದೂರ
ಅದು  ನನ್ನ ಇರುವಿನ ವಿಸ್ತಾರ
ಬ್ರಹ್ಮಾಂಡದ ಕುರುಕು ನಾನು
ಅವಕಾಶಗಳ ಬಾಗಿಲು ತೆರೆದ ಆಕಾಶ ನಾನು

ನಾನು ಚಿರ ಯೌವ್ವನೆ
ಬಸವಳಿಯದ ಬಾನ ಚೆಲುವೆ
ನಿರಾಳತೆ ನನ್ನ  ಬದುಕು
ಕಾಮನಬಿಲ್ಲು ನನ್ನ ಬಳುಕು

ಅಮು ಭಾವಜೀವಿ
   

No comments:

Post a Comment