Friday, June 21, 2019

*ಮೋಡಗಳ ಮಿಲನಕ್ಕೆ*

ಮೋಡಗಳ ಮಿಲನಕ್ಕೆ
ಮಳೆ ಹನಿಯ ಸಿಂಚನ
ನಿಸರ್ಗ ರಮಣೀಯತೆಗೆ
ಮೆರುಗು ಈ ನವಿಲ ನರ್ತನ

ಬಾನ ಬಿಳಿಯ ಬಯಲಿನಲ್ಲಿ
ಕಾಮನ ಬಿಲ್ಲಿನ ಕವನ
ಬಿರುಬೇಸಿಗೆಯಲ್ಲೂ
ಬಳಲಿದ ಧರೆಗೆ ನವಚೇತನ

ಬಣ್ಣಬಣ್ಣದ ಗರಿಗೆದರಿ
ಮಯೂರ ಮನ ಸೆಳೆಯಲು
ಗುಡುಗು ಮಿಂಚಿನ ಆರ್ಭಟಕೆ
ಮೋಡದಿ ಮಳೆ ಸುರಿಯಲು

ಮನದಣಿಯೇ ಹೀರಿ
ತಂಪಾಯಿತು ಧರೆಯೊಡಲು
ಬೀಳೊಳಗೂ ಚಿಗುರಿದ
ಹಸಿರು ತುಂಬಿದ ಬಯಲು

ವರ್ಷ ಕಾಲದ ಈ ಸಂಭ್ರಮ
ಮಳೆ ಇಳೆಯ ಸಂಗಮ
ಹೊಸ ಕನಸು ಮೊಳಕೆಯೊಡೆದು
ಪ್ರಕೃತಿ ನಲಿಯಿತು ಮಿಂದು

0140ಪಿಎಂ23032018

*ಅಮುಭಾವಜೀವಿ*
   

No comments:

Post a Comment