ಮೋಡದ ಮರೆಯಲಿ
ಚಂದ್ರನ ಕರೆಯಲಿ
ನಲ್ಲನೆ ನಿನ್ನ ತುಂಟತನ
ಪ್ರೀತಿಗೆ ಅದುವೇ ಪ್ರೇರಣ
ತಾರೆಗಳೆಷ್ಟೇ ಇದ್ದರೂ ಕೂಡ
ಬೆಳದಿಂಗಳಿಗೆ ಸಮವಾಗದು
ಗೆಳತಿಯರೆಷ್ಟೆ ಇದ್ದರೂ ಕೂಡ
ನಲ್ಲನೇ ನಿನ್ನ ಸರಿಗಟ್ಟದು
ನೀ ನಕ್ಕು ನಗಿಸುತಿರೆ
ಇರುಳ ತಂಗಾಳಿ ತೀಡಿದಂತೆ
ನೀ ಮುತ್ತುಗಳ ಮಳೆ ಸುರಿಯೆ
ಇಬ್ಬನಿಯ ಹನಿಗಳು ಕೂಡಿದಂತೆ
ನೀನಾಡುವ ಮಾತೆಲ್ಲವೂ
ಜೇನಿನ ನುಡಿಗಳಂತೆ
ನೀ ಕೊಡುವ ಕನಸುಗಳೆಲ್ಲ
ಸ್ವರ್ಗಕ್ಕೆ ಕಿಚ್ಚು ಹಚ್ಚಿದಂತೆ
ನೀ ನನ್ನೊಂದಿಗಿರಲು
ಹುಣ್ಣಿಮೆಯ ಬೆಳಕು ಚೆಲ್ಲಿದಂತೆ
ನೀ ಕ್ಷಣ ತೊರೆದರು
ಅಮವಾಸ್ಯೆಯ ಕತ್ತಲು ಕವಿದಂತೆ
ಬಾನಲ್ಲ ಈ ತೋಳ ಸೇರು
ವಿರಹದುರಿಯಿಂದ ಮಾಡು ಪಾರು
ಒಲವಿನ ಶಶಿಕಿರಣ ನೀನಾಗು
ಬಾಳ ಕವಿತೆಯ ಭಾವ ನೀನಾಗು
0542ಎಎಂ01042018
ಅಮು ಭಾವಜೀವಿ
No comments:
Post a Comment