ಸೋಲುಗಳು ಕಾಯುತ್ತಿವೆ
ನಿರಂತರವಾಗಿ ನನ್ನ ಸದೆಬಡಿಯಲು
ಎದೆಗುಂದದೆ ಎದುರಿಸಬೇಕು
ನಾನು ಇಲ್ಲಿ ಬದುಕುಳಿಯಲು
ಅಮುಭಾವಜೀವಿ
ಹೊರಡುವೆನು ನಾನು
ಅಲ್ಲಿನ ನನ್ನ ಮನೆಗೆ
ಕರೆಯದಿರಿ ಯಾರೂ ನನ್ನನ್ನು
ನಾನು ಓಗೊಡಲಾರೆ ನಿಮ್ಮ ಕರೆಗೆ
ಅಮುಭಾವಜೀವಿ
*ಮೌನದಿ ತೆರೆದಿದೆ*
ಬೆಳಕಿನ ಸಿರಿಯನು ತಂದ ನೇಸರ
ನಳನಳಿಸುತಿದೆ ನೋಡಿಲ್ಲಿ ಪರಿಸರ
ಹಕ್ಕಿಗಳ ಚಿಲಿಪಿಲಿ ಕಲರವ
ಎಲೆಗಳ ಮೇಲೆ ಇಬ್ಬನಿಯ ಉತ್ಸವ
ಇನ ಬಂದನು ದಿನ ತಂದನು
ಬೆಳಗಾಯಿತು ಎಲ್ಲ ಏಳಿರೆಂದನು
ತಂಗಾಳಿಯು ತುಸು ಮೆಲ್ಲ ಬೀಸಲು
ಗಿಡಮರ ತಲೆಬಾಗಿಹವು ನಮಸ್ಕರಿಸಲು
ಹರಿಯುವ ನದಿಯ ನೀರಿನ ನರ್ತನ
ಸವಿದನದೊ ರವಿ ಸಾಗರದಲೆಗಳ ಚುಂಬನ
ಮೊಗ್ಗು ಬಿರಿದು ದಳವ ತೆರೆದು
ಸೌಂದರ್ಯ ಸೌಗಂಧವ ಹಂಚಿತೆಲ್ಲೆಡೆಯೂ
ಹೊನ್ನರಥವನೇರಿ ಬರುವ ಭಾಸ್ಕರನ
ಹೊಸಚೈತನ್ಯದಿ ಸ್ವಾಗತಿಸಿತು ನಿಸರ್ಗ
ಇರುಳ ಕಳೆದು ಬೆಳಕು ಹರಿದು
ಇಳೆಯ ಚೆಲುವಾಯಿತು ಸ್ವರ್ಗ
ಏಳು ಮಾನವ ಇನ್ನೇಕೆ ತಡ
ನೀನೂ ಸೇರಿಕೋ ಅದರ ಸಂಗಡ
ದಿನವಿದು ಮೌನದಿ ತೆರೆದಿದೆ
ನಿನ್ನುಪಯೋಗಕೆ ಕಾದಿದೆ
0639ಎಎಂ21052017
*ಅಮುಭಾವಜೀವಿ*
No comments:
Post a Comment