ನಂಬಿಕೆಯ ಗೋಡೆ ಕುಸಿಯುತ್ತಿದೆ,
ಅಪನಂಬಿಕೆ ಆನಂದವ ಕಸಿಯುತಿದೆ
ಸಂಬಂಧದೊಳಗೆ ಅನುಮಾನ ನುಸುಳಿ
ಆ ಅವಮಾನ ಬಿರುಕುಗೊಳಿಸಿತು,
^^^^^^^^^^^^^^^^^^^^^^^^
ಹೃದಯದಳುವ ಕೇಳದೆ
ಮೊನಚು ಮಾತಿಂದ ಚುಚ್ಚಿದೆ
ಎದೆಯ ಗೂಡು ಬರಡಾಗಿ
ಬಿಡಿಸಿಕೊಂಡಿತು ಬಂಧ ಎರಡಾಗಿ
^^^^^^^^^^^^^^^^^^^^^^~^~
ಪ್ರೀತಿಗಾಗಿ ಹಂಬಲಿಸೋ ನನ್ನ
ನೋವನ್ನ ನೀ ಬೆಂಬಲಿಸಿದೆ
ಮಿಡಿವ ಕಂಬನಿಯೊಳಗೆ
ನೀ ದಾಹವ ತೀರಿಸಿಕೊಂಡೆ
^^^^^^^^^^^^^^^^^^^^^^^^^
ಅಕ್ಕರೆಯ ಮಾತುಗಳು ಬಿರುನುಡಿಯಾಗಿ
ಸಕ್ಕರೆಯಂತ ಪ್ರೀತಿ ಸತ್ತುಹೋಗಿ
ಜೀವ ಜೀವನ ನರಳುತಿದೆ
ಆಸರೆಯ ಬೆರಳೀಯಬಾರದೆ
^^^^^^^^^^^^^^^~^~~€~~
ನೀ ಏನೆಂದರೂ ಬೇಸರವಿಲ್ಲ ನನಗೆ
ನಿನ್ನೊಲವೊಂದ ಬಯಸುವೆ ಕೊನೆಗೆ
ಮರೆತುಬಿಡು ಆ ಕಹಿಯ
ಸವಿಯೋಣ ಬಾಳ ಸಿಹಿಯ
^^^^^^^^^^^^^^^^^^^^^^^^
ನೂರು ನೋವನೆಲ್ಲ ನೂಕಾಚೆ ದೂರ
ನಲಿವಿಗೊಂದಿರಲಿ ನಮ್ಮನಾಳೋ ಅಧಿಕಾರ
ಮತ್ತೆ ಕವಿಯದಂತೆ ಅಂಧಕಾರ
ಒಲವಿಂದ ಬೆಳಗಲೆಮ್ಮ ಸಂಸಾರ,
^^^^^^^^^^^^^^^^^^^^~~~~
1034ಎಎಂ25052016
****ಅಮು****
ಎಲ್ಲೆಲ್ಲೋ ಅಲೆದು
ನಾ ಬಸವಳಿದು ಬಂದು
ಒಮ್ಮೆ ಹಿಂತಿರುಗಿ ನೋಡಿದೆ
ನಾ ಅರ್ಥವಿಲ್ಲದೇ ವ್ಯರ್ಥ ನಡೆದಿದ್ದೆ
ಇಲ್ಲಿರುವ ಎಲ್ಲವನ್ನು ಬಿಟ್ಟು
ಇಲ್ಲದಿರುವುದಕೆ ಆಸೆಪಟ್ಟು
ಎಲ್ಲೂ ಸಲ್ಲದೆ ಎಲ್ಲಾ ಕಳಕೊಂಡೆ
ನಾನೆಂಬ ಅಹಮಿನ ಕತ್ತಲೆಯೊಳಗೆ
ಸಂಬಂಧದ ಬಂಧವ ಕಳಚಿ
ಅವರಲ್ಲೆಲ್ಲಾ ನೋವಂದನುಳಿಸಿ
ದೂರ ದಿಗಂತವ ಪಡೆವ ಭ್ರಮೆಯಲಿ
ಇಲ್ಲಿರುವ ನಂದನವನವ ಬಾಡಿಸಿದೆ
ಹೂವಿಂದ ನಗುವ ಕಲಿಯದೇ
ಹಣ್ಣಿಂದ ಸವಿಯ ಪಡೆಯದೆ
ಹಸಿರಿಂದ ಆನಂದ ಹೊಂದದೆ
ಹಳಸಿದಾಸೆಯ ಹಿಂದೆ ನಡೆದೆ
'ನಾನು' ಹೋಗದೆ ಗುಡಿ ಸುತ್ತಿದರೇನು
ನಾನು ಬಿಡದೇ ಮೋಕ್ಷ ದೊರೆವುದೇನು
ನಾನೇನನೂ ತರದೆ ನನ್ನದೆಂದು ಬೀಗಿದೆ
ತೊಟ್ಟು ಕಳಚಿದ ಹಣ್ಣಾಗಿ ಬಿದ್ದು ಮಣ್ಣಾದೆ
ಬೆಳಗಲಿ ಪ್ರೀತಿಜ್ಯೋತಿ
ಅಂಧಕಾರದ ತಮವ ಕಳೆದು
ಉಕ್ಕಲಿ ಆ ನಗುವು
ಮಳೆಗಾಲದ ಮಿಂಚಂತೆ ಹೊಳೆದು.
ಅಮು
1048ಎಎಂ240515
No comments:
Post a Comment