*ಎಚ್ಚರದಿಂದಿರು*
ಸಿಕ್ಕ ಕಡೆ ಒತ್ತಬೇಡ
ನಿನ್ನ ಅಮೂಲ್ಯ ಮತವನು
ದುಷ್ಟರ ಕೈಗಿಡಬೇಡ
ನಿನ್ನ ದೇಶದ ಹಿತವನು
ಒಳ್ಳೊಳ್ಳೆಯ ಮಾತನಾಡಿ
ನಿನ್ನ ಕೈ ಕಾಲಿಗೆ ಬಿದ್ದು
ಹಣ-ಹೆಂಡದ ಆಮಿಷವೊಡ್ಡಿ
ಕೊಂಡು ಕೊಳ್ಳುವರು ಎಚ್ಚರದಿಂದಿರು
ಪೊಳ್ಳು ಭರವಸೆ ಕೊಟ್ಟು
ಸುಳ್ಳು ಆಶ್ವಾಸನೆಗಳನ್ನಿಟ್ಟು
ಜಾತಿ-ಧರ್ಮಗಳ ಎದುರಿಗಿಟ್ಟು
ಮರಳು ಮಾಡುವರು ಎಚ್ಚರದಿಂದಿರು
ಅಧಿಕಾರದಲ್ಲಿರುವಾಗಿನ ದರ್ಪ
ಈಗಿಲ್ಲ ಅದನ್ನು ನೀ ನಂಬಬೇಡ
ಮನೆ ಬಾಗಿಲಿಗೆ ಬಂದುನೆಂದು
ಯಾಮಾರಬೇಡ ಎಚ್ಚರದಿಂದಿರು
ಐದು ನಿಮಿಷದ ನಿನ್ನ ಹಕ್ಕು
ಬದಲಿಸುವುದು ದೇಶದ ದಿಕ್ಕು
ಯೋಚಿಸಿ ನೀ ಮತ ಹಾಕುವಾಗ
ಕ್ಷಣ ಮರೆಯದಂತೆ ಎಚ್ಚರದಿಂದಿರು
ಪ್ರಜಾಪ್ರಭುತ್ವದ ಬೇರು ನೀನು
ಕೊರೆದು ತಿನ್ನುವವರ ತಳ್ಳು ನೀನು
ಆಮಿಷಕ್ಕೆ ನೀ ಬಲಿಯಾದರೆ
ಮರ ಒಣಗುವುದು ಎಚ್ಚರದಿಂದಿರು
0602ಪಿಎಂ07042018
*ಅಮುಭಾವಜೀವಿ*
No comments:
Post a Comment