Friday, June 21, 2019

ಅವಳೆಂದರೆ
ಬಣ್ಣಗಳನೆರಚದೇ
ರಂಗು ರಂಗಾದವಳು
ಹುಣ್ಣು ಎಂದು ಭಾವಿಸಿದಲ್ಲಿ
ಹಣ್ಣಾಗಿ ಸವಿಯಿತ್ತವಳು
ಕಣ್ಣಾ ಗಲು ಬಂದು
ಕಣ್ಣೀರ ಧಾರೆ ಸಹಿಸಿ ದವಳು ಮಮತೆಯಲ್ಲಿ ವಂಚಿತಳಾದರು
ಮಡಿಲ ಪ್ರೀತಿಯ ಧಾರೆ ಎರೆದವಳು
ಅವಳೇ ಇವಳು
ನನ್ನ ಬದುಕಿನ ಬೆಂಬಲವಾದವಳು

ಅವಳೆಂದರೆ
ಈ ಉರಿ ಬಿಸಿಲಲ್ಲೂ
ತಂಪು ನೀಡುವ ನೆರಳು
ಮಾತು ಮೌನವಾಗಿರಲು
ಇಂಪಾಗಿ ನುಡಿಯುವ ಕೋಕಿಲ ಕೊರಳು
ಒಂಟಿತನದ ಭೀಕರತೆಯಲ್ಲೂ
ಏಕಾಂತದ ತಂಗಾಳಿ ಆದವಳು
ಬಸವಳಿದ ಬದುಕಲ್ಲೂ
ಯಶ ಗಳಿಸಲು ಸ್ಪೂರ್ತಿಯಾದವಳು
ನಾನು ಇಲ್ಲಿ ಇದ್ದೇನೆ ಎಂದರೆ
ಅದಕ್ಕೆಲ್ಲ ಕಾರಣವಾದಗಳು

ಅವಳೆಂದರೆ
ನೀ ಬರದ ಬೇಗೆಯೊಳಗೂ
ತಂಪಾಗಿ ಸುಳಿದವಳು
ಉಕ್ಕುವ ಪ್ರವಾಹದೊಳಗು
ಹುಲ್ಲುಕಡ್ಡಿಯ ಆಸರೆಯಾದವಳು
ಬೇಸರದ ಮರುಭೂಮಿಗಳಗೆ
ಮತ್ತೆ ಚಿಮ್ಮುವ ಸಿಹಿ ಬುಗ್ಗೆ ಇವಳು
ಸಾಗರದ ತೀರದೊಳಗೂ
ಸಿಹಿ ನೀರ ಒರತೆಯಾದವಳು
ಹೆಸರಿಲ್ಲದ ಬದುಕಿಗೆ
ಉಸಿರಾಗಿ ಜೀವ ತುಂಬಿದವಳು

ಅವಳೆಂದರೆ
ಇರುಳ ಬಾನಿನೊಳಗೆ
ಬೆಳದಿಂಗಳ ಆದವಳು
ಮುಂಜಾನೆಯ ಮಂಜಿನಲಿ
ಮರಿ ಸೂರ್ಯನಂತೆ ಹೊಳೆಯುವವಳು
ಹೂವಿನೆದೆಯಲಿ ಮಲಗಿ
ಗೊಯ್ಗುಡುವ ದುಂಬಿ ಇವಳು
ಕಲ್ಪವೃಕ್ಷದ ಕಾಯಿಯೊಳಗೆ
ಪರಿಶುದ್ಧ ಜಲವಾದವಳು
ಬೀದಿಗೆ ಬಿದ್ದ ಬದುಕನ್ನು
ಎತ್ತಿ ನಿಲ್ಲಿಸಿದವಳು

0206ಪಿಎಂ21032019

No comments:

Post a Comment