Thursday, June 13, 2019

*ನಾವು ಕೂಡ ಓದಬೇಕು*

ನಾವು ಕೂಡ ಮಕ್ಕಳೇ
ನಮಗೇಕಿಲ್ಲ ಶಾಲೆ

ನಮ್ಮ ಕನಸು ನೂರಿವೆ
ಆದರೂ ಅಕ್ಷರಗಳೇಕೆ ದೂರಿವೆ
ನಾವು ಕೂಡ ಓದಬೇಕು
ಚಿಂದಿ ಆಯುವ ಬದುಕು ಸಾಕು

ಬಡತನವೇಕೆ ನಮಗೆ ಮಾತ್ರ
ಕಷ್ಟಗಳೇಕಿವೆ ನಮ್ಮ ಹತ್ರ
ಓದುವ ಹಂಬಲ ನಮ್ಮದು
ಅದಕೆ ಬೆಂಬಲವೆಲ್ಲಿಹುದು

ನಾವು ಕಲಿತು ಅಕ್ಷರ
ಆಗಬೇಕು ಸಾಕ್ಷರ
ನಮ್ಮ ಪಾಲಿಗೂ ಶಾಲೆ ತೆರೆಯಲಿ
ಶಿಕ್ಷಣದಿಂದ ಬಡತನ ನಮ್ಮ ತೊರೆಯಲಿ

ಮಾಸಿದ ಬಟ್ಟೆಗೆ ಮುಕ್ತಿ ಸಿಗಲಿ
ಸಮವಸ್ತ್ರವೂ ನಮ್ಮದಾಗಲಿ
ಹರುಕು ಮುರುಕು ಚೀಲ ತೊಲಗಲಿ
ಶಾಲೆಯ ಕೈಚೀಲ ನಮ್ಮ ಹೆಗಲೇರಲಿ

ನಾವೂ ಕೂಡ ಓದು ಕಲಿವೆವು
ಸರ್ಕಾರಿ ಶಾಲೆಗೆ ಹೋಗಿ ಜಾಣರಾಗ್ವೆವು

0638ಪಿಎಂ27052018

*ಅಮು ಭಾವಜೀವಿ*

ಕಾಡಿ ಕಾಡಿ ನನ್ನ
ಮನವ ಕದಡಿದವಳೇ
ಉದ್ದೇಶವೇನಿತ್ತು ನೀ ನನ್ನ
ಮಾನವ ಮುದುಡಿಸೋ ರಗಳೆ

ಬೇಡವೆಂದರೂ ಕಣ್ಣಿಗೆ ಬಿದ್ದೆ
ಬೇಕಂತಲೇ ನನ್ನ ನಿದ್ದೆಯ ಕದ್ದೆ
ಸುಂದರ ಕನಸು ಕಾಣುವ ಬದಲು
ನೀ ಹಗಲುಗನಸ ಮರೀಚಿಕೆಯಾದೆ

ಹಗಲಿರುಳೆನ್ನದೆ ಹಂಬಲಿಸಿದೆ
ಊಟ ನಿದ್ರೆಯ ಬಿಟ್ಟು ಹಲುಬಿದ
ಪ್ರೀತಿಯ ಹಿಂದೆ ನಾ ನಡೆದೆ
ಬರಿಗಾಲಿವ ಫಕೀರನಂತೆ

ಮನಸ್ಸಿಗೆ ಬಂದವಳು ಹೋದೆ
ನೀ ಹೃದಯವ ಗಾಯಮಾಡಿ
ನನ್ನ ಸಂತೃಪ್ತ ಬದುಕಿನಲ್ಲಿ ನೀ
ಬಂದು ಹೋದೆ ಸುಖವ ಮಾಯಮಾಡಿ

ನನ್ನ ಭರವಸೆಯನ್ನೇ ಹುಸಿ ಮಾಡಿದವಳು
ಪ್ರೀತಿ ಹೆಸರಲ್ಲಿ ಮನವ ಘಾಸಿಗೊಳಿಸಿದವಳು
ಆಸರೆಯ ಹುಲ್ಲುಕಡ್ಡಿ ಎಂದುಕೊಂಡರೆ
ನೇಣಿನ ಕುಣಿಕೆ ಹಾಕಿ ಎಳೆದವಳು

ಏಕೆ ಹೀಗೆ ಮಾಡಿದೆ
ಕಾರಣವೇನೆಂದು ಹೇಳಬಾರದೇ
ನನಗಿದ್ದ ಒಂದೇ ಒಂದು ಬದುಕನ್ನು
ಸರಿ ಮಾಡಿಕೊಳ್ಳಲು ಆಗದಂತೆ ನಾಶಗೈದೆ

ಅಮು ಭಾವಜೀವಿ

*ಬಾ ಮಗು ಶಾಲೆಗೆ*

ಓ ಮಗು ನಗುತ ಬಾ
ನೀನು ಶಾಲೆಗೆ
ತೆರೆದಿದೆ ಶಿಕ್ಷಣದ ಬಾಗಿಲು
ನಿನ್ನ ಪಾಲಿಗೆ

ಶಾಲೆಯೆಂಬ ಆಲಯ
ನಿನ್ನ ಆಟದಂಗಳ
ನಲಿಯುತ ಕಲಿಯು ಬಾ
ಹಿಡಿದು ಪುಸ್ತಕಗಳ

ಬಿಸಿಯೂಟದ ಜೊತೆ ಜೊತೆಗೆ
ಹಾಲಿದೆ ನಿನ್ನ ಆರೋಗ್ಯಕೆ
ಸಮವಸ್ತ್ರದ ಜೊತೆ ಜೊತೆಗೆ
ಶೂ ಸಾಕ್ಸ್  ನಿನ್ನ ಆನಂದಕೆ

ಹೊಸ ಪುಸ್ತಕಗಳು ಆಗಲೇ
ನಿನಗಾಗಿ ಕಾದಿವೆ ಶಾಲೆಯಲ್ಲಿ
ಗುರುಗಳು ನಿನ್ನ ಕೈಬೀಸಿ
ಕರೆವರು ಶಾಲೆಯ ಬಾಗಿಲಲ್ಲಿ

ಪಾಠಿ ಚೀಲ ಹೆಗಲಿಗೇರಿಸಿ
ಓಡೋಡಿ ಬಾ ಶಾಲೆಗೆ
ಎಲ್ಲಾ ಭಯವ ಬಿಟ್ಟು ಅಲ್ಲೆ
ನಲಿಯುತ ಕಲಿಯು ಬಾ ಶಾಲೆಗೆ

0615ಎಎಂ27052018

*ಅಮು ಭಾವಜೀವಿ*

ಈ ಸಂಜೆಯ ಆ ರಂಜನೆಗೆ
ನಿನ್ನೀ ವಯ್ಯಾರವೇ ಭೂಷಣ
ನಾನಿಲ್ಲಿ ಬದುಕಿರುವುದಕೆ
ನೀನೇ ತಾನೇ ಕಾರಣ

ಅಮುಭಾವಜೀವಿ

ಅಂದುಕೊಂಡದ್ದು ಬಹಳ
ಸಾಧಿಸಿದ್ದು ಅತಿ ವಿರಳ
ಬೆನ್ತಟ್ಟುವವರಿಲ್ಲದೆ
ಬತ್ತಿದೆ ನನ್ನದೆ
ಮುಳುಗಡೆಯ ಭೀತಿಗೆ
ಹುಲ್ಲುಕಡ್ಡಿ ಬರುವುದೇ ಆಸರೆಗೆ.
308ಎಎಂ270515

No comments:

Post a Comment