*ಒಲವಿಗಾಗಿ ಹಂಬಲಿಸಲು*
ಬದುಕಬೇಕು ನಾನು
ಬರಲು ಸೋಲು ನೋವುಗಳೇನು
ಒಲವಿಗಾಗಿ ಹಂಬಲಿಸಲು ನಾನು
ಕಾರ್ಮುಗಿಲಲ್ಲಿ ಮಿಂಚಾಗಿ ಬಂದೆ ನೀನು
ನಿರಾಸೆಯ ವಿಷವೇರಿ ಬಾಳಿಗೆ
ಭರವಸೆಯನೇ ಕೊಂದಿತ್ತು ನಾಳೆಗೆ
ಮುಳುಗುವ ಈ ಅಣು ಜೀವಿಗೆ
ಹುಲ್ಲುಕಡ್ಡಿಯಾಗಿ ಬಂದೆ ನನ್ನ ಸೇವೆಗೆ
ಹಂಗಿಸುವವರೊಡನೆಲ್ಲ
ಜಂಗಿ ಕುಸ್ತಿಯನಾಡಿಸಿದೆ
ಪ್ರೀತಿಸುವವರೊಡಗೂಡಿಸಿ
ಸ್ಥಿತಿಗತಿಯೇನು ಉತ್ತುಂಗಕ್ಕೇರಿಸಿದೆ
ಒಲವಿನ ಬೀಜವ ಬಿತ್ತಿ
ಬೀಳಿಸಿದೆ ನನ್ನನ್ನು ಹೆಮ್ಮರವಾಗಿ
ನಾ ರೆಂಬೆ-ಕೊಂಬೆ ಚಾಚಿದರು
ಮರೆಯದೆ ನೀ ಜೊತೆಗಿದ್ದೆ ನೆರಳಾಗಿ
ನಾನೆಂಬ ಹೆಮ್ಮೆಯು ನಿನ್ನಿಂದ
ನೀ ತಂದೆ ಬದುಕಿಗೆ ಆನಂದ
ನಿನಗೆಂದೆಂದೂ ಮೀಸಲು ಹೃದಯ ಸಿಂಹಾಸನ
ಅಲ್ಲಿಂದಲೇ ನನಗೆ ಹೇಳಿದರು ಆಶೀರ್ವಚನ
11102014
*ಅಮು ಭಾವಜೀವಿ*
ನನ್ನೊಳಗಿನ ಅಮಲಿಳಿದಾಗ
ನಿನ್ನೊಲವ ನಾನಿಲ್ಲಿ ಕಂಡೆ
ನನ್ನೆಲ್ಲಾ ಗೆಲುವಿನೊಳಗೆ
ನಿನ್ನ ಶ್ರಮವಿರುವುದ ನಾ ಒಪ್ಪಿಕೊಂಡೆ .
ಅಮುಭಾವಜೀವಿ
ತೆರೆದಿದೆ ಇಂದು ಜ್ಞಾನದ ಬಾಗಿಲು
ಬನ್ನಿ ಮಕ್ಕಳೇ ಶಾಲೆಗೆ ಸೇರಲು
ವಿದ್ಯಾ ಚಟುವಟಿಕೆಯಲಿ ಪಾಲ್ಗೊಳ್ಳಿ
ಹಬ್ಬಲಿ ನಿಮ್ಮ ಜ್ಞಾನದ ಬಳ್ಳಿ
<><>><><><><><><><<<<<<
ಸರ್ಕಾರದ ಸವಲತ್ತುಗಳು ಕಾದಿವೆ
ನಿಮಗಾಗಿ ಶಾಲೆಯ ಆಲಯದಲ್ಲಿ
ಶಿಕ್ಷಕರು ಸಜ್ಜುಗೊಂಡಿಹರು
ನಿಮ್ಮನು ಬರಮಾಡಿಕೊಳ್ಳಲು ಅಲ್ಲಿ
+++++++++////+++++++
2805160625ಎಎಂ
ಬನ್ನಿರಿ ಬನ್ನಿರಿ ಖುಷಿಯಿಂದ
ರಜೆಯನು ಕಳೆದ ಮೂಡಿಂದ
ಪಾಠಿಪುಸ್ತಕದ ಚೀಲ ಹೆಗಲಿಗೆ ಹಾಕಿ
ಶಾಲೆಯ ಬಯಲಿಗೆ ಓಡೋಡಿ ಬನ್ನಿ
ತಳಿರು ತೋರಣ ಕಟ್ಟಿಹರು
ಸಮವಸ್ತ್ರವ ನೀಡಲು ಕಾದಿಹರು
ಕ್ಷೀರಭಾಗ್ಯವ ನಿಮಗಾಗಿ ತಂದಿಹರು
ಹಸಿವಿಗೆ ಬಿಸಿಯೂಟ ಸಿದ್ದಪಡಿಸಿಹರು
ಹಳೆ ಹೊಸ ಸ್ನೇಹಿತರ ಸಮ್ಮಿಲನ
ಆಹಾ ! ಎಂಥ ರೋಮಾಂಚನ
ಓದು ಬರಹ ಕಲಿಯಲು
ಬನ್ನಿರಿ ತೆರೆದಿದೆ ಶಾಲೆಯ ಬಾಗಿಲು
ಸಂತಸದಿಂದ ಬನ್ನಿರಿ ಮಕ್ಕಳೇ
ಶಾಲಾವರಣದ ಸುಂದರ ಸುಮಗಳೆ
ಆಟಪಾಠವ ಕಲಿಯುತಲಿ
ನಾಳಿನ ಬಾಳಿಗೆ ಬೆಳಕಾಗಲು
ತಪ್ಪದೆ ಬನ್ನಿರಿ ಶಾಲೆಯ ಕಡೆಗೆ
ಒಪ್ಪದಿ ಕಲಿಯಿರಿ ವಿದ್ಯೆಯನಿಂದಿಗೆ
ರಜೆಯ ಮಜದಿಂದ ಹೊರಬನ್ನಿ
ವಿದ್ಯಾವಂತರಾಗಿ ನಾಡಿಗೆ ಹೆಸರು ತನ್ನಿ
1158ಎಎಂ28052017
ಅಮುಭಾವಜೀವಿ
No comments:
Post a Comment