ಮರ ಬೆಳೆಸಲಾಗದವರು
ಮಳೆಗಾಗಿ ಹೋಮ ಮಾಡಿಸಿದರು
ಅಯ್ಯೋ ಇದು ಎಂಥ ಕಾಲವಯ್ಯಾ
*ಯಾನ ಹೊರಟಿದೆ*
ಬದುಕಿನ ನೆಲದಲ್ಲಿ ಈಗ
ಹೊಂಗನಸು ಮೂಡುವ ಕಾಲ
ಶುಭಾಶಯಗಳ ಸದಾಶಯ
ಈಡೇರಿದ ಸುಂದರ ಸಕಾಲ
ಸಂಗಾತಿ ಜೊತೆ ಸೇರಿಸಲು
ಸಂಪ್ರೀತಿ ಮೊಳಕೆಯೊಡೆದಿರಲು
ಜೀವನ ಯಾನ ಹೊರಟಿದೆ
ಸುಖದ ಸವಿಭಾವ ಮಿಡಿದು
ಮೌನವೆಲ್ಲವೂ ಮಾತಾಗಿದೆ
ಮಾತೆಲ್ಲವೂ ಹೊಸತನ ತಂದಿವೆ
ಒಂಟಿತನವೆಂಬುದು ದೂರಾಗಿ
ಸಂಸಾರಿಯಾದೆ ನಾ ಭೈರಾಗಿ
ಮುಂಗಾರಿನ ಅಭಿಷೇಕಕೆ
ಮಳೆಬಿಲ್ಲಿನ ಮೈ ಪುಳಕವ ತಂದ
ಖುಷಿ ಈಗ ಬದುಕಿನಲ್ಲಿ
ಬೇಸರಕ್ಕೆ ಜಾಗವಿಲ್ಲ ಇಲ್ಲಿ
ಸಮೃದ್ಧ ಸಮಾಧಾನ ತಂದ
ನಮ್ಮ ಈ ಅನುಬಂಧ
ಸದಾ ಸಂಭ್ರಮಿಸುತಲಿ
ಬಾಳೋಣ ಸುಖವಾಗಿ
1135ಎಎಂ03062017
*ಅಮುಭಾವಜೀವಿ*
No comments:
Post a Comment