Thursday, June 13, 2019

*ಪ್ರತಿಭಾನ್ವೇಷಣೆ*

ಎಷ್ಟೊಂದು ಜನ  ಇಲ್ಲಿ
ಯಾರು ಆಯ್ಕೆಯಾಗೋರು
ಪ್ರತಿಭಾನ್ವೇಷಣೆ ಪರೀಕ್ಷೆಯಲ್ಲಿ
ಯಾವ ಪ್ರತಿಭೆಗಿಲ್ಲಿ ಪುರಸ್ಕಾರ

ಒಂದೊಂದು ಪಾತ್ರದಲ್ಲಿ
ನೂರಾರು ಪ್ರತಿಭೆಗಳು
ಅನಾವರಣಗೊಂಡಿವೆ ಇಲ್ಲಿ
ಹತ್ತಾರು ಸನ್ನಿವೇಶಗಳು

ಆಧ್ಯಾತ್ಮಿಕ ಧಾರ್ಮಿಕ
ಐತಿಹಾಸಿಕ ಸಾಮಾಜಿಕ
ಎಲ್ಲ ಕಾಲದ ಸಾಧಕರಿಲ್ಲಿ
ಅವತರಿಸಿ ಬಂದಿಹರಿಲ್ಲಿ

ಎಷ್ಟೊಂದು ಕನಸುಗಳು
ಎಷ್ಟೊಂದು ಮನಸುಗಳು
ಸ್ಪರ್ಧೆಯ ಗರ್ಭದಲ್ಲಿ ಯಾವ
ಪ್ರತಿಭೆ ಪ್ರಜ್ವಲಿಸುವುದೋ

ಎಲ್ಲರಲೂ ಗೆದ್ದೇ ಗೆಲ್ಲುವ ಹುಮ್ಮಸ್ಸು
ಆಯ್ಕೆಗಾರನ ತೀರ್ಪಿನಲ್ಲಿದೆ ಯಶಸ್ಸು
ಭಾಗವಹಿಸುವ ಅವಕಾಶವಿದೆ ಎಲ್ಲರಿಗೂ
ವೇದಿಕೆಯಲಿ ರಾರಾಜಿಸುವ ಅವಕಾಶ ಯಾರಿಗೋ

0124ಪಿಎಂ04062017
ಅಮುಭಾವಜೀವಿ

No comments:

Post a Comment