*ಅವಳೆಂದರೆ ಗುಡುಗು*
*ಸಿಡಿಲಾರ್ಭಟ*
*ಮಳೆಯಲಿ ನೆನೆದು*
*ನಡುಗುವಾಗ ಅವಳೇ*
*ಬೆಚ್ಚನೆಯ ದುಪ್ಪಟ್ಟ*
*ಅಮುಭಾವಜೀವಿ*
ಬೆಳೆಸೋಣ ಮರವನು
ನೀಗಲು ಬರವನು
ನಾಳೆಯ ಪೀಳಿಗೆಗೆ
ಹಸಿರನು ಉಳಿಸಿ
ಭುವಿಯನು ತಣಿಸಿ
ಹರಸಲಿ ನಮ್ಮ ಬಾಳಿಗೆ
ಜಗದ ಜೀವಜಾತಕೆ
ಈ ನಿಸರ್ಗವೊಂದೇ ಆಸರೆ
ಆದಾಗದಿರಲಿ ನಮ್ಮಿಂದಲೇ ಕಣ್ಮರೆ
ನಾವಳಿದರೂ ಉಳಿಯಲಿ ಪರಿಸರ
ಎಂದೂ ಮಾಸದಿರಲಿ ಅದರ ಸಡಗರ
ನಿಸರ್ಗವಿಲ್ಲದ ಬಾಳು ದುಸ್ತರ
ಮನುಜಗೊಂದು ವೃಕ್ಷ ನೆಡಿ
ಅದರ ಮೇಲ್ಕುಂತು ಹಾಡಲಿ ಬಾನಡಿ
ಅದಕಾಗಲಿ ಇಂದೇ ಮುನ್ನುಡಿ
ಬನ್ನಿರೈ ಬಾಂಧವರೇ
ಇಂದೇ ಪಣ ತೊಡೋಣ
ಪರಿಸರವ ನಾವ್ ಉಳಿಸೋಣ
ಅಮು
1205ಪಿಎಂ050615
ನೀ ಮರೆತರೂ
ನಾ ಮರೆಯಲಾರೆ
ನೀ ಕೊಟ್ಟಿರುವೆ
ನನಗಂತಹ ಉಡುಗೊರೆ
**********************
ಹರೆಯದ ಅಮಲಿನಲಿ
ತೇಲುತಲಿರುವಾಗ
ನಿನ್ನ ತುಮುಲವ ಅಮಲಿಗೇರಿಸಿ
ನನ್ನ ನೀ ವಶಪಡಿಸಿಕೊಂಡೆ
*************************
ಅಕ್ಕರೆಯ ಮಾತುಗಳಿಂದ
ಸಕ್ಕರೆಯ ರುಚಿ ತೋರಿಸಿ
ಸರ್ವಸ್ವವನು ನಿನ್ನದಾಗಿಸಿಕೊಂಡೆ
ತೋಳ್ತೆಕ್ಕೆಯಲಿ ನನ್ನ ಬಂಧಿಸಿ
****************************
ನಿನ್ನ ನಾ ಪೂರ್ತಿ ನಂಬಿದೆ
ನನ್ನನ್ನೇ ನಿನ್ನ ಪೂಜೆಗರ್ಪಿಸಿದೆ
ತಾಯಾಗುವ ವರ ನೀಡಿ
ಮರೆಯಾಗಿ ಹೋದೆ ಓಡಿ
***********************
ನೀ ಕೊಟ್ಟುದುದ ನಾ ಕಳೆಯದೆ
ಜತನದಿ ನಾ ಜೋಪಾನ ಮಾಡಿದೆ
ಅದೀಗ ಎದೆಯೆತ್ತರಕ್ಕೆ ಬೆಳೆದಿದೆ
ನೀ ಮಾಡಿದ ಮೋಸಕೆ ಸಾಕ್ಷಿಯಂತಿದೆ
*******************
ಹೆಣ್ಣನ್ನು ಹಣ್ಣೆಂದು ತಿಂದು
ಬಿಸಾಡುವ ನಿನ್ನಂತಹವರಿಗಿರಲಿ ಧಿಕ್ಕಾರ
ನಂಬಿಕೆಯೇ ಉಸಿರಾದ
ಪ್ರೀತಿಗೆ ಮಾಡದಿರಿ ಅಪಚಾರ.
653ಎಎಂ050615
ಅಮು
No comments:
Post a Comment