ಆಧುನಿಕರು ನಾವು
ಅಂಗೈಯಲ್ಲೇ ನಮ್ಮ ಜಗವು,,,,
ಕಣ್ಣಿಗೆ ಕಾಣುವವರ ಮರೆತು
ಕಾಣದವರೊಂದಿಗೆ ಬೆರೆತು
ಬದುಕುವೆವು ನಾವು
ಯಂತ್ರಗಳ ಗುಲಾಮರಂತೆ
ವಸ್ತುಗಳ ಪ್ರೀತಿಸುವೆವು
‘ವ್ಯಕ್ತಿ’ತ್ವಗಳ ದ್ವೇಶಿಸುವೆವು
ಇಲ್ಲಿರುವುದನೆಲ್ಲಾ ಬಿಟ್ಟು
ಅಲ್ಲಿರುವುದರೆಡೆಗೆ ತುಡಿಯುವೆವು
ಅಪರಿಚಿತರೊಂದಿಗೆ ಸರಸ
ಪರಿಚಿತರೊಂದಿಗೆ ವಿರಸ
ಕೂಗಿದರೆ ಕೈಹಿಡಿವವರ ಬಿಟ್ಟು
ಕರೆದರೂ ಬಾರದವರ ಬಯಸುವೆವು
ಹೇಳುವೆವು ಕೇಳುವೆವು
ಕೀಲಿಮಣೆಯಲ್ಲಿ ಬೆರಳಾಡಿಸುತ
ಎಲ್ಲಾ ಇದ್ದು ಇಲ್ಲದವರಂತೆ ಇಲ್ಲಿ
ಏನೂ ಇಲ್ಲದೆ ಎಲ್ಲಾ ಇರುವವರಂತೆ ಅಲ್ಲಿ
ಹಿರಿಯರೊಂದಿಗೆ ಸಂಪರ್ಕವಿಲ್ಲ
ಕಿರಿಯರೊಂದಿಗೆ ಒಡನಾಟವಿಲ್ಲ
ಒಂಟಿತನದ ಕಗ್ಗಂಟಿನೊಳಗೆ
ಬದುಕ ಕಟ್ಟಿಕೊಳ್ಳುವ ಬಡಾಯಿಗಳು ನಾವು.
###ಅಮುಕವಿತೆ###
ನನ್ನ ನಾ ಮರೆಯುವ ಮುನ್ನ
ಕ್ಷಮಿಸಿರುವೆ ನಿನ್ನ ತಪ್ಪನ್ನ //
ಪ್ರೀತಿಸೆದು ಅಂಗಲಾಚಿ
ಮೋಸವ ನೀನಲ್ಲಿ ಮರೆಮಾಚಿ
ಕಾಡಿದೆ,ಬೇಡಿದೆ,ಕನಕರಿಸಿ
ಒಪ್ಪಿದ್ದಕ್ಕೆ ನನಗಿಂತ ಶಿಕ್ಷೆಯೇ?
ನಿನ್ನ ವಶವಾಗಿಸಿಕೊಡು
ನನ್ನ ಕೃಶವಾಗಿಸಿ ಕೊದು
ಬದುಕುವ ಭರವಸೆಯನ್ನೇ
ಕಿತ್ತೊಗೆದೆ ನನ್ನೊಳಿಂದು
ನಿನ್ನ ಮಾತಿನ ಪ್ರೀತಿಯ ನಂಬಿ
ಮನಸು ಕೊಟ್ಟ ನಾನೊಬ್ಬ ಹುಂಬಿ
ಮೈಮರೆಸಿ ನನ್ನ ಸೇವಿಸಿ
ಜೀರ್ಣವಾಗದೆ ಬಾಳ ಅಜೀರ್ಣಗೈದೆ,
ನಿನ್ನ ಕಪಟಕೆ ನನ್ನ ಚಡಪಡಿಕೆ
ಹೊರೆ ಹೊತ್ತು ನೆರವ ಬೇಡಿದೆ
ಎಲ್ಲಾ ಮರೆತಿರುವೆ ನೀನ್ಯಾರು
ಎನ್ನಲು ಕುಸಿದೆ ಇಲ್ಲದೇ ಒಂದು ಸೂರು,
ನಾನಂತೂ ತಬ್ಬಲಿ
ನನ್ನ ಬಾಳಾಗದಿರಲಿ ಅದಕೆ ಬಲಿ
ನಾ ಮರೆಯುವ ಮುನ್ನ
ಬಂದು ಸೇರುವೆಯಾ ನನ್ನ?
******ಅಮು******
ಮಾತನಾಡದ ಮೌನದೇವತೆ
ಅವಳೇ ಈ ನನ್ನವಳಂತೆ
ಆಸೆಗಳಿವೆ ಮನದಲ್ಲಿ
ಕನಸುಗಳಿವೆ ಕಂಗಳಲ್ಲಿ
ವ್ಯಕ್ತಪಡಿಸದ ನಿರ್ಭಾವ ಮುಖದಲ್ಲಿ
ಶಿಲಾಬಾಲೆಯೇ ಇವಳು ನನ್ನ ಸಮ್ಮುಖದಲ್ಲಿ. ====ಅಪ್ಪಾಜಿ ಎ ಮುಸ್ಟೂರು====
*ನಮಗೇಕೆ ಹಂಗು*
ನಮಗೇಕೆ ಹಂಗು
ಇನ್ನೊಬ್ಬರಾ ಗುಂಗು
ನಮ್ಮಂತೆ ನಾವಿರೋಣ
ಹೂವಾಗಿ ಅರಳೋಣ
ಯಾರಿಗಾಗೋ ಮೋಡ ಕಟ್ಟಿಲ್ಲ
ಅವರ ಕೇಳಿ ಮಳೆ ಸುರಿಯೋಲ್ಲ
ನಮ್ಮಂತೆ ನಾವಿರೋಣ
ಮಳೆಯಾಗಿ ಬಾಳ ಬೆಳೆಯೋಣ
ಕತ್ತಲಿಗೆಂದೂ ಸಂಜೆ ಹೆದರುವುದಿಲ್ಲ
ಬೆಳಗಾಯ್ತೆಂದು ಕತ್ತಲು ಕೊರಗುವುದಿಲ್ಲ
ನಮ್ಮಂತೆ ನಾವಿರೋಣ
ಬೆಳಕು ಕತ್ತಲಾಟದಿ ಮೈಮರೆಯೋಣ
ಹರಿಯಲೇಬೇಕೆಂದು ನದಿ ಓಡೊಲ್ಲ
ತೀರ ಸೇರಲೆಂದು ಅಲೆ ಬರೊಲ್ಲ
ನಮ್ಮಂತೆ ನಾವಿರೋಣ
ನದಿಯಾಗಿ ಸೇರಿ ಅಲೆಯಾಗಿ ಉಕ್ಕೋಣ
ಹುಟ್ಟು ಅನಿವಾರ್ಯವಾದರೂ
ಸಾವು ನಿಶ್ಚಿತವಾದರೂ
ನಮ್ಮಂತೆ ನಾವಿರೋಣ
ಹುಟ್ಟುಸಾವಿನಾಚೆಗೂ
ನಾವ್ ಉಳಿಯೋಣ.
*ಅಮುಭಾವಜೀವಿ*
*ಮಿಡಿದ ಕವಿತೆ*
ನಿನ್ನ ಕಿರುನಗೆಯೊಂದು ಮೂಡಲು
ಬಾನಲಿ ತೇಲಿ ಬಂದಂತೆ ಬೆಳ್ಮುಗಿಲು
ನಿನ್ನ ಕಣ್ನೋಟ ಸೆಳೆಯಲು
ದುಂಬಿಯಂತೆ ಬಂದೆ ಸೇರಲು
ಕೆನ್ನೆ ಮುತ್ತುವ ಮುಂಗುರುಳ
ಲಾಸ್ಯಕೆ ಸೋತು ಬಂದೆ
ಕೈ ಬಳೆ ಸದ್ದಿಗೆ ಮರುಳಾಗಿ
ಆ ನಾದಕೆ ತಲೆದೂಗಿ ನಿಂದೆ
ತೊಂಡೆ ತುಟಿಯ ಕಂಡು
ನಾನಲ್ಲೇ ಬೆರಗಾದೆ
ಬಳುಕುವ ನಡುವನು
ಬಳಸಲು ನಾ ಮರವಾದೆ
ಒಲವಿನೋಲೆ ಬರೆದು
ನಿನ್ನ ನೆನಪ ಬಸಿದು
ಆರಾಧಿಸಿದೆ ಹುಚ್ಚನಂತೆ
ನೀ ಸಿಗಲು ಇಲ್ಲ ಚಿಂತೆ
ಭಾವ ನೂರು ಮಿಡಿದ ಕವಿತೆ
ಬರದ ನೋವು ನೀಗಿಸಿದ ಒರತೆ
ಈ ಮಿಲನ ಚೆಲುವ ಕವನ
ನಿನ್ನ ಹೊರತು ಇರದು ಜೀವನ
0527ಪಿಎಂ08082018
*ಅಮು*
[8/8, 6:23 PM] +91 78297 52958: ♦♦♦♦♦♦♦♦♦♦♦
*ಕವಿ - ಅಮು ಅಣ್ಣ*
*ಕವನ - ಮಿಡಿದ ಕವಿತೆ*
ಸಂಗಾತಿಯ ತುಟಿಯಂಚಲಿ ಮೂಡುವ ಕಿರುನಗೆಯೊಂದು ಬಾನಲಿ ತೇಲಿ ಬಂದಂತರ ಬೆಳ್ಮುಗಿಲು ಆಕೆಯ ನೋಟ ಸೆಳೆಯಲಿ ದುಂಬಿಯಂತೆ ಸೇರಾಯಿತು ಅವಳೊಲವು.....ಕೆನ್ನೆಗೆ ಮುತ್ತಿಡುವ ಮುಂಗುರುಳು ಲಾಸ್ಯಕ್ಕೆ ಸೋತಿದೆ....ಅವಳ ಕೈ ಬಳೆಯ ಸದ್ದಿಗೆ ಮರುಳಾಗಿ ಆ ನಾದಕ್ಕೆ ತಲೆದೂಗಿದೆ....ತೊಂಡಿಯಂತ ಅವಳ ತುಟಿಯ ಕಂಡು ಬೆರಗಾಗಿ...ಅವಲ ಬಳುಕುವ ನುಡುವ ಬಳಸಬೇಕಾಗಿದೆ....ಒಲವಿನೋಲೆಯ ಬರೆದು ಅವಳ ನೆನಪ ಬಸಿದು ಆರಾಧಿಸಬೆಕಿದೆ ಹುಚ್ಚನಂತೆ...ಅವಳ ಸಿಕ್ಕಿದೊಡನೆ ಯಾವುದಿಲ್ಲ ಚಿಂತೆ...ಭಾವ ನೂರು ಮಿಡಿವ ಕವಿತೆ ಬರದ ನೋವು ನೀಗಿಸಿದ ಒರತೆ ಮಿಲನದ ಚೆಲುವ ಕವನ ಅವಳ ಹೊರತು ಜೀವನ *ಬಾಳಿಗೆ ಜೊತೆಯಾಗಿ ಬಾಳ ಸಂಗಾತಿಯಾಗಿ ಬರುವ ಹೆಂಡತಿಯ ಮೆಲಿನ ಭಾವ ಸೂಪರ್👌🏻👌🏻👌🏻👌🏻*
*ಲಾವಣ್ಯ. ಎಸ್.....✍🏻*
[8/8, 6:25 PM] ರಾಮಚಂದ್ರ ನಿಟ್ಟೂರು: *ಅಮುಭಾವ ಜೀವಿಯವರ ಮಿಡಿದ ಕವಿತೆ*
ಮಿತ್ರರು ಕವಿತೆಗೆ ಇಂದು ಪ್ರೇಮವನ್ನು ಮತ್ತು ತುಂಟತನವನ್ನು ಧಾರೆ ಎರೆದಂತೆ ಬರೆದಿದ್ದಾರೆ.. ಕವಿತೆ ಸಕತ್ ರಂಜಿಸುತ್ತದೆ.....ತೊಂಡೆ ತುಟಿ,ಒಲವಿನ ಓಲೆ....ಹೀಗೆ ಸಾಲುಗಳು ಖುಷಿ ಕೊಡುತ್ತವೆ
🙏
No comments:
Post a Comment