Thursday, June 13, 2019

*ಬೆಳಗಿನ ಹಾಯ್ಕು*

ಮುಂಜಾನೆ ಮಂಜು
ಚೆಲ್ಲಿ ಸ್ವಾಗತಿಸಿತು
ದಿನಕರನ

ಬಿರಿದ ಮೊಗ್ಗು
ಅರಳಿ ಕರೆಯಿತು
ದಿನಕರನ

ಹಕ್ಕಿ ಸುಸ್ವರ
ಸುಪ್ರಭಾತವಾಯಿತು
ದಿನಕರಂಗೆ

ಗಿಡಮರವು
ಚಾಮರ ಬೀಸಿದವು
ದಿನಕರಂಗೆ

ತಂಗಾಳಿ ಕೂಡ
ಸುಗಂಧ ಹರಡಿತು
ದಿನಕರಗೆ

ಇಬ್ಬನಿ ತಾನು
ಆರತಿಯನೆತ್ತಿತು
ದಿನಕರಗೆ

ದಿನದಾರಂಭ
ಪುಳಕಿತಗೊಳಿಸಿ
ಪ್ರೇರಣೆಯಾಯ್ತು

0804ಎಎಂ13062017

*ಅಮುಭಾವಜೀವಿ*

ನಿನ್ನೆದೆಗೊರಗಿ
ನನ್ನ ಮನ ಕರಗಿ
ಭಾವವಾಯ್ತೊಂದು ಕವಿತೆ
ಅದು ಎಂದೂ ಬತ್ತದ ಒರತೆ

ಕಾರ್ಗಲ್ಲಿಗೂ ಶಿಲ್ಪದ ಯೋಗ
ಒರಟ ಆದನು ಕವಿ ಈಗ
ಕೋಗಿಲೆಯಂತೆ ಉಲಿದಿದೆ ರಾಗ
ಕವಿರತ್ನನೆನಿಸಿದವನ ಲೇಖನಿಯಲೀಗ

ನನ್ನೆಲ್ಲಾ ಏಳಿಗೆಗೆ ನೀನೆ ಸ್ಪೂರ್ತಿ
ನಿನ್ನಿಂದಲೇ ನನಗೊಲಿಯಿತು ಕೀರ್ತಿ
ಈಗ ನೀ ಬೆರಳ ತೋರಿದರೆ
ಮಾಡುವೆ ಆ ಮಾಯಾಮೃಗವ ಸೆರೆ

ಏನೂ ಇಲ್ಲದವನಲ್ಲೂ
ಸಾಧಿಸುವ ಛಲ ತುಂಬಿದೆ
ನನ್ನನ್ನಿಷ್ಟೆತ್ತರಕೇರಿಸಿದ ನಿನ್ನ
ವಿಶ್ವಾಸಕೆ ಎದೆ ತುಂಬಿ ಬಂದಿದೆ

ನನ್ನ ನಾಲಗೆಯ ಮೇಲೆ
ನೀ ಬರೆದೆ ಸ್ವರ್ಣಾಕ್ಷರ
ಇಂದು ಅದಾಗಿದೆ ನಿನ್ನೆದುರು
ಕವಿತ್ವದ ಹೆಮ್ಮರ

ನೀ ನನ್ನ ಪಾಲಿನ ಸರಸ್ವತಿ
ಒಲವಿಂದ ರೂಢಿಸಿದೆ ಸಂಸ್ಕೃತಿ
ನಾನಿನ್ನ ದಾಸ,ಈ ಎದೆಯೇ ನಿವಾಸ
ನೀನೇ ನನ್ನ ಶ್ವಾಸ.

1034 ಪಿಎಂ 130615

ನೀ ನನ್ನ ಬಯಸುವ ಕಾರಣ
ಪ್ರೀತಿಸಲೆನಗದೇ ಪ್ರೇರಣ
ನನಗಿಲ್ಲ ಯಾವ ಆಧಾರ
ಅದಕಾಗಿ ಮಾಡಿದೆ ಈ ನಿರ್ಧಾರ

ಹೆಣ್ಣೆಂಬ ಕಾರಣಕ್ಕೆ ನನ್ನ
ಬಿಸುಟಿ ಹೋದರು ಹೆತ್ತವರು
ಆಶ್ರಯವಿಲ್ಲದೇ ಅಬಲೆಯಾಗಿಹರು
ಅದೆಷ್ಟೋ ನನ್ನಂತಹವರು

ಅಬಲೆಯೆಂಬ ಕನಿಕರ ಬೇಡ
ಪ್ರೀತಿಸು ಸಾಕು ಇರುವೆ ಸಂಗಡ
ಲತೆಗೆ ಮರದಾಸರೆ ಬೇಕು
ನನ್ನ ವ್ಯಥೆಗೆ ಹೆಗಲಾಗು ಸಾಕು

ನನ್ನ ಹುಟ್ಟೊಂದು ಮೋಸ
ಅದು ಕಸಿಯಿತು ನನ್ನೆಲ್ಲಾ ಸಂತಸ
ನಿನ್ನೊಲವು ನನಗಂತೂ ವಿಶೇಷ
ಅದರಲಿ ಒಂದಿನಿತು ಬರದಿರಲಿ ದೋಷ

ಆಶ್ರಯ ನೀಡಿದವರ ಹರಕೆ
ಬಾಳಿ ಬದುಕಬೇಕೆಂಬ ಬಯಕೆ
ನನ್ನ ಕರೆತಂದಿದೆ ನಿನ್ನ ಹತ್ತಿರಕೆ
ಹುಸಿಗೊಳಿಸದಿರು ನನ್ನಾ ನಂಬಿಕೆ

ಬಾಳು ಕೊಟ್ಟದ್ದಕ್ಕಾಗಿ
ನಿನ್ನ ಏಳುಬೀಳಲಿ ಜೊತೆಯಿರುವೆ
ನೀನಿತ್ತ ಪ್ರೀತಿಗೆ ಪ್ರತಿಯಾಗಿ
ಈ ಬಾಳಜ್ಯೋತಿಯಂತೆ ಬೆಳಗುವೆ

457ಎಎಂ130615

ಹಾಯ್ಕು        

ಜಲಪಾತಕ್ಕೆ
ಜೀವ ಕಳೆ ಮುಂಗಾರು
ಮಳೆಯಿಂದಲೆ.

ಅಮು ಭಾವಜೀವಿ

ಹಾಯ್ಕು               

ಮಳೆ ಬರಲು
ಇಳೆಯಲ್ಲ ಹಸಿರು
ಅದೇ ಉಸಿರು

ಅಮು ಭಾವಜೀವಿ

No comments:

Post a Comment