ಸ್ನೇಹ...!
•••••••••••
ಬದುಕು ಬರಿದೆನಿಸಿದಾಗ
ಅದನು ಹಸಿರಾಗಿಸುವುದು
ಒಬ್ಬಂಟಿ ತನ ಕಾಡಿದಾಗ
ನೂರಾನೆ ಬಲ ತುಂಬುವುದು
ಸೋತು ಕೈಚೆಲ್ಲಿ ಕೂತಾಗ
ಗೆಲ್ಲುವ ಭರವಸೆಯಾಗುವುದು
ನೋವಿನ ಕಂಬನಿಯ ಸುರಿವಾಗ
ಆಪ್ತ ಬೆರಳಾಗಿ ಕಣ್ಣೊರೆಸುವುದು
ಸ್ನೇಹ ನಮಗೆಂದೂ ಮರದ ನೆರಳು
ಅದರಡಿಯಲ್ಲಿ ಬಾಳುವ ನಾವೇ ಧನ್ಯರು
ಅಮು ಭಾವಜೀವಿ
ನನ್ನೀ ಹೃದಯ ಅಳುತಿದೆ ಗೆಳತಿ
ಅದಕೀಗ ಬೇಕು ನಿನ್ನಾ ಪ್ರೀತಿ
ಕನಿಕರಿಸಿ ಒಪ್ಪಿಗೆ ಸೂಸು
ಕನವರಿಸುತಿದೆ ಪಾಪ ಈ ಕೂಸು
10ಪಿಎಂ180515
No comments:
Post a Comment