*ನೀನೇ ಆಯುಧವಾಗು*
ಇನ್ನು ಯಾರೂ ಬರರು
ಹೆಣ್ಣೆ ನಿನ್ನ ರಕ್ಷಣೆಗೆ
ನಿನಗೆ ನೀನೇ ಆಯುಧವಾಗು
ಕಾಮುಕರ ಪೈಶಾಚಿಕತೆಗೆ
ಯಾವ ಕಾನೂನು ತಡೆಯಲಾರದು
ನಿನ್ನ ಮೇಲಿನ ದೌರ್ಜನ್ಯವ
ಎಲ್ಲಾ ಮುಗಿದ ಮೇಲೆ ದೀಪ ಹಚ್ಚಿ
ಪ್ರತಿಭಟಿಸಿ ಕೇಳುವುದು ನ್ಯಾಯವ
ಯಾರೇ ನಿನ್ನೊಂದಿಗಿರಲಿ
ನಿನ್ನ ರಕ್ಷಣೆಯ ಹೊಣೆ ನೀನೇ ಹೊರು
ಮಿಂಚಿ ಹೋದ ಕಾಲಕ್ಕೆ
ಆರ್ಭಟಿಸಿ ಮೂರೇ ದಿನದಲ್ಲಿ ಮರೆವರು
ನಿರ್ಭಯಳಿಂದ ಹಿಡಿದು ಇಂದು
ಮಧುವಿನ ತನಕ ನಡೆದದ್ದೇ ಹೀಗೆ
ಕಾನೂನು ಬಲಗೊಳ್ಳಲೆ ಇಲ್ಲ
ಅಮಾಯಕ ಹೆಣ್ಣುಗಳ ರಕ್ಷಸಲಾಗಲಿಲ್ಲ
ಚಂಡಿಯಾಗು ಚಂಡಾಲರ
ರುಂಡಗಳ ಚಂಡಾಡಲು
ಭದ್ರ ಕಾಳಿಯೇ ಮೊದಲಾಗು
ಕಾಮಪಿಶಾಚಿಗಳ ರಕ್ತ ಹೀರಲು
ಹೆಜ್ಜೆ ಹೊರಗಿಡುವ ಮೊದಲೇ
ನಿನ್ನೊಂದಿಗಿರಲಿ ಆತ್ಮರಕ್ಷಣೆಯ ಅಸ್ತ್ರ
ಕೊಲ್ಲಲು ಬಂದವನನೇ ಕೊಂದು ಬಿಡು
ಹೆದರದೆ ಹೆದರಿಸುವಂತಿರಲಿ ನಿನ್ನ ಪಾತ್ರ
1215ಎಎಂ20042019
ಅಮು ಭಾವಜೀವಿ
ಲೋಲಾಕ್ಷಿ ಕೆರೋಡಿ ಅವರ ಪ್ರತಿಕ್ರಿಯೆ
👌ನಮಗೆ ಅರಿವಿದೆ..ಧೈರ್ಯ ತುಂಬುವ ಸೋದರರಿರಬೇಕು ನಿಮ್ಮಂತೆ...ದಿನದ ಶುಭಾರಂಭಕ್ಕೊಂದು ಒಳ್ಳೆಯ ಕವಿತೆ ನೀಡಿದ
ಸಾವಿರ ಕವಿತೆಯ ಸೋದರನಿಗೆ ಶುಭವಾಗಲಿ💐
ಪ್ರಿಯಾಂಕ ಬೀಜೂರು ಅವರ ಪ್ರತಿಕ್ರಿಯೆ
ಹೆಣ್ಣಿನ ಮೇಲಾಗುತ್ತಿರುವ ದೌರ್ಜನ್ಯವನು ನೋಡಿ ನಿನ್ನ ಆತ್ಮರಕ್ಷಣೆಯ ಅಸ್ತ್ರ ನಿನ್ನೊಂದಿಗಿರಲಿ ಎಂದು ಕವನದ ಮೂಲಕ ಕವಿ ತಿಳಿಸಿದ್ದಾರೆ👌
ಸುನಿತ ಪ್ರಕಾಶ್ ಅವರ ಪ್ರತಿಕ್ರಿಯೆ
ನಿಜ ಸರ್ ನಮ್ಮ ದೇಶದಲ್ಲಿ ಇನ್ನು ಎಷ್ಟು ಶತಮಾನಗಳು ಉರುಳಬೇಕೋ ಗೊತ್ತಿಲ್ಲ ಹೆಣ್ಣಿನ ರಕ್ಷಣೆಗೆ. ತುಂಬಾ ಅರ್ಥಪೂರ್ಣ ಕವಿತೆ ಸರ್ 🙏🙏🙏🙏
No comments:
Post a Comment