*ಎಚ್ಚೆತ್ತುಕೊಳ್ಳುವ ಕಾಲ*
ಅವರ ಕಚ್ಚಾಟದಲ್ಲಿ
ನಿಮ್ಮನೇನು ಬಲ್ಲರು
ಅವರ ಹುಚ್ಚಾಟಗಳಿಗೆಲ್ಲ
ನಿಮ್ಮನೇ ಬಳಸಿಕೊಂಡರು
ಅಧಿಕಾರದ ಅಮಲೇರಿದವಗೆ
ಸಹಕಾರದ ನೆನಪಿರದು
ಹೊಳೆ ದಾಟಿ ಬಂದ ಮೇಲೆ
ಅಂಬಿಗನ ಹಂಗು ಇರದು
ನರಿಯ ಕೂಗು ಎಂದಿಗೂ
ಗಿರಿಯ ತುದಿಯ ಮುಟ್ಟದು
ಹಬ್ಬಿದ ಬಳ್ಳಿಯೊಂದು
ಮರವನೇ ತುಳಿದು ಹಾಕುವುದು
ಆಳುವವರ ಚರ್ಮ ದಪ್ಪ
ನಿಮ್ಮ ನೋವು ಅವರ ಚುಚ್ಚದು
ಒಗ್ಗಟ್ಟು ಇಲ್ಲದ ಹೋರಾಟ
ಎಂದೂ ಅವರ ಕಚ್ಚದು
ಕೊಟ್ಟ ಭರವಸೆಗಳ ನಂಬಿ
ವಿಧಿಯಿಲ್ಲದೆ ಕಾಲ ತಳ್ಳುತಿರಬೇಕು
ಆಸ್ವಾಸನೆಗಳು ಆಸೆ ತೋರಿಸಿ
ಚಟ್ಟ ಕಟ್ಟುವ ಮೊದಲು ಎಚ್ಚೆತ್ತುಕೋಬೇಕು
ಅಧಿಕಾರ ಕೊಡುವ ಕಾಲ
ಬಂದಾಗ ಅಮಲೇರಿ ಮೈಮರೆಯಬೇಡ
ಅಲ್ಲಿ ಎಡವಿದರೆ ಮತ್ತೆ ಮತ್ತೆ
ಏಳಲಾಗದಂತೆ ಬೀಳುವೆ ನೋಡ
0742ಎಎಂ07032019
*ಅಮು ಭಾವಜೀವಿ*
No comments:
Post a Comment