ಗಜಲ್ 25
ಇಂಥ ಕಂತೆಕಂತೆ ನೋವುಗಳ ನನಗೇಕೆ ಕೊಟ್ಟೆ ದೇವರೇ
ಬದುಕುವ ಭರವಸೆಯನ್ನು ಕೈಬಿಟ್ಟೆ ದೇವರೇ
ಸೋಲುಗಳ ಸಹಿಸಿ ಸಹಿಸಿ ಸೋತು ಹೋದೆ
ಗೆಲ್ಲುವ ಹಂಬಲವ ಮರೆತೇಬಿಟ್ಟೆ ದೇವರೇ
ಬಡತನದ ಬೇಗೆಯಲ್ಲಿ ಬೆಂದು ಬಸವಳಿದೆ
ಬಂದಾಗಿದ ಬದುಕುವೆನೆಂದು ಪಣ ತೊಟ್ಟೆ ದೇವರೇ
ಒಂದು ಕ್ಷಣವೂ ಸುಖ ಕಾಣಲಿಲ್ಲ
ಸಹಿಸಿ ಬಾಳುವೆನೆಂದು ಮಾತುಕೊಟ್ಟೆ ದೇವರೇ
ಬಂದಂತೆ ಬದುಕುತ್ತಾನೆ ಅಮು ಎಂದೆಂದಿಗೂ
ಸೋಲುತ್ತೇನೆ ಸಾಯಲಾರೆಂದು ಹೆಜ್ಜೆಯಿಟ್ಟೆ ದೇವರೇ
0401ಪಿಎಂ25052019
*ಅಮು ಭಾವಜೀವಿ*
No comments:
Post a Comment