Friday, June 14, 2019

ವಿಮರ್ಶೆ 2

[5/25, 4:04 PM] ಶಶಿರೇಖ: ನಮಸ್ತೆ ಅಮು ಸರ್ ಅವರೇ🙏🙏🙏

*ನೀನೇ ಆಯುಧವಾಗು* ಕವನದಲ್ಲಿ, ಹೆಣ್ಣಿಗೆ ಹೇಳುವ ಮಾತುಗಳಿವೆ ನಿನಗೆ ನೀನೇ ಆಯುಧವಾಗು ಅಂತ. ಹ್ಮ್ ನಿಜ ಸರ್ ಹೆಣ್ಣನ್ನು ರಕ್ಷಿಸೋಕೆ ಆ ಸಮಯದಲ್ಲಿ ಯಾರೂ ಇರಲ್ಲ, ಅಂತಹದರಲ್ಲಿ ಅವಳಿಗೆ ಅವಳೇ ಆಯುಧ ಆಗ್ಬೇಕು. ಯಾರಿಗೆ ತಾನೇ ನ್ಯಾಯ ಸಿಕ್ಕಿದೆ ಹೇಳಿ ಸರ್? ನಿರ್ಭಯಳಿಗೂ ಸಿಗಲಿಲ್ಲ, ದಾನಮ್ಮಳಿಗೂ ಸಿಗಲಿಲ್ಲ, ಈಗ ಮಧುವಿಗೂ ಸಿಗಲಿಲ್ಲ. ರೇಣುಕಳ ಸಾವಿಗೆ ಕಾರಣನಾದವನು ಮಾತ್ರ ಸಿಕ್ಕ ನೋಡಿ. ಅಂತಹ ರಕ್ಕಸರು ಇದಾರೆ ನಮ್ಮ ಸಮಾಜದಲ್ಲಿ. ಹೆಣ್ಣಿಗೆ ರಕ್ಷಣೆ ಅನ್ನೋದೇ ಮರೀಚಿಕೆಯಾಗಿದೆ. ಏನು ತಾನೇ ಮಾಡಬಲ್ಲಳು ಹೇಳಿ. ಅವಳಿಗೆ ಅನಾದಿ ಕಾಲದಿಂದಲೂ ನೀನು ಅಬಲೆ ಅಂತನ್ನೋ ವಿಷ ವಿಷಯವನ್ನ ಅರೆದು ಕುಡಿಸಿದ್ದಾರೆ. ಈಗ ಸಬಲೆಯಾಗೋಕೆ ಹೊರಟರೆ ಆಗುತ್ತಿಲ್ಲ. ಆದರೆ ಮುಂದೊಂದು ದಿನ, ಅಂತಹ ರಕ್ಕಸರಿಗೆ ಪಾಠ ಕಲಿಸೋ ಆಯುಧವಾಗು ಅಂತನ್ನೋ ಭಾವ ಇದೆಯಲ್ಲ ಅಷ್ಟು ಸಾಕು ಸರ್ ನಿಮ್ಮ ಕವನ ಗೆಲ್ಲೋಕೆ.

ಸುಪರ್ ಸರ್👌🏻👌🏻👌🏻🙏🙏🙏

ಶಶಿರೇಖಾ ವಿಜಯಪುರ
[5/25, 5:07 PM] ಶಿವಮೂರ್ತಿ ಹೆಚ್ ದಾವಣಗೆರೆ: ಶಾರದಾಂಬೆಯ ವರಪುತ್ರರು
ಶಾಲೆಯ ಮಕ್ಕಳಿಗೆ ಶಿಕ್ಷಕರು
ಸಾಮಾನ್ಯರಲ್ಲಿ ಅಸಾಮಾನ್ಯರು
ಸಾವಿರಾರು ಕವಿತೆಗಳ ಸರದಾರರು.

ಕಾವ್ಯನಾಮದಿ ಅಮುಭಾವಜೀವಿ
ಕಾವ್ಯ ಸಾಗರದಿ ಮಹಾನ್  ಅನುಭವಿ
ಕುಳಿತಲ್ಲೇ ಕವನಗಳ ರಚಿಸೋ ಕವಿ
ಕಾವ್ಯ ಸೌರಭವು ಹರಡಲಿ ಭಾನುಭುವಿ.

ಅಮುಭಾವಜೀವಿ ಸರ್ ಅವರ ನೀನೇ ಆಯುಧವಾಗು ಕವಿತೆ ಮಹಿಳೆಯರಿಗೆ ಆತ್ಮವಿಶ್ವಾಸ ತುಂಬುವಂತಿದೆ.‌ಈಗೀಗ ನಡೆಯುತ್ತಿರುವ ಮಹಿಳಾ ದೌರ್ಜನ್ಯಗಳ ತಡೆಗಟ್ಟಲು, ಆತ್ಮರಕ್ಷಣೆಗಾಗಿ ತಮಗೆ ತಾವೇ ರಕ್ಷಣೆಯ ಆಯುಧಗಳಾಗಬೇಕೆಂಬವ ಆಶಯ ಚೆನ್ನಾಗಿದೆ
[5/25, 5:42 PM] ಮುರಳೀಧರ ನೆಲಮಂಗಲ: ಶ್ರೀಯುತ ಅಮು ಭಾವಜೀವಿ ರವರು ನನಗೆ ವಾಟ್ಸಪ್ ನಿಂದ ಪರಿಚಿತರಾದವರು. ವೃತ್ತಿಯಲ್ಲಿ ಶಿಕ್ಷಕರಾಗಿದ್ದು ಪ್ರವೃತ್ತಿಯಲ್ಲಿ ಕವಿಗಳಾಗಿ ಕನ್ನಡ ಸಾಹಿತ್ಯಸೇವೆಯನ್ನು ಮಾಡುತ್ತಿರುವುದು ಅಭಿನಂದನಾರ್ಹರು. ವಾಟ್ಸಪ್ ಶುರುವಾದಾಗಿನಿಂದಲೂ ಇವರು ರಚಿಸಿದ ಕವನಗಳನ್ನು ಓದುತ್ತಾ ಬಂದಿದ್ದೇನೆ. ಎಲ್ಲವನ್ನೂ ಚೆನ್ನಾಗಿ ರಚಿಸಿ ಕವಿಗೋಷ್ಠಿಗಳಲ್ಲಿ ವಾಚಿಸಿದ್ದಾರೆ. ನಾನು ಸಹ ಇವರ ಕವನ ವಾಚನವನ್ನು ಕೇಳಿದ್ದೇನೆ. ಇವರು ಭಾಗವಹಿಸಿರುವ ಕವಿಗೋಷ್ಠಿಗಳಲ್ಲಿ ಭಾಗವಹಿಸಿ ನಾನೂ ಕವನ ವಾಚನ ಮಾಡಿರುವುದು ನನಗೆ ಬಹಳ ಸಂತಸ ತಂದಿದೆ.

ಇವರು ಇಲ್ಲಿ ಹಾಕಿರುವ ಕವನಗಳಲ್ಲಿ ಮೊದಲನೆಯದರ ಬಗ್ಗೆ ಹೇಳಬೇಕೆಂದರೆ ಒಂದು ಹೆಣ್ಣು ಮಕ್ಕಳ ಮೇಲೆ ಆಗುತ್ತಿರುವ ಅತ್ಯಾಚಾರವನ್ನು ಎದುರಿಸಲು ತಾವೇ ಶಕ್ಯರಾಗಬೇಕೆಂದು ಯಾರೂ ಬಂದು ರಕ್ಷಿಸುವುದಿಲ್ಲವೆಂದು ಚಂಡಿಯಾಗು ಚಂಡಾಲರ ರುಂಡ ಚಂಡಾಡಲು ಎಂಬುದಾಗಿ ಸಬಲೆಯಾಗೆಂದು ಹೇಳಿರುವುದು ಮಾರ್ಮಿಕವಾಗಿ.
ಹಾಗೆಯೇ ಎರಡನೇ ಕವನದಲ್ಲಿ ಮತದಾನ ಮಾಡುವಾಗ ಯೋಚಿಸಿ ಸಮರ್ಥರಾದವರನ್ನು ಆಯ್ಕೆ ಮಾಡಿ ಎಂದು ಹೇಳಿರುವುದು ಬಹಳ ಚೆನ್ನಾಗಿದೆ ಧನ್ಯವಾದಗಳು
[5/25, 5:44 PM] +91 99029 92912: ಅಮು ಭಾವಜೀವಿ ಇವರು ಒಬ್ಬ ಶಿಕ್ಷಕರಾಗಿ ಸಾಹಿತ್ಯ ಓದುವ ರಚಿಸುವ ಕಲಿಕಾವಸ್ತು ತಯಾರಿಕೆ ಕವಿಗೋಷ್ಟಿಯಲ್ಲಿ ಭಾಗವಹಿಸುವ ಅವರ ಪ್ರವೃತ್ತಿ ನಿಜಕ್ಕು ಮೆಚ್ಚುವಂತದ್ದು
ರಾಜ್ಯದ ಹಲವಾರು ಪತ್ರಿಕೆಗಳಲ್ಲಿ ಕವನಗಳು ಪ್ರಕಟಗೊಂಡಿದ್ದು ಶ್ಲಾಘನೀಯ.
ಅವರು ಪ್ರತಿದಿನವೂ ಕೂಡ ಲವಲವಿಕೆಯಿಂದಿರುವುದು ಕಂಡುಬರುತ್ತದೆ
ಇನ್ನೂ ಅವರು ಬರೆದ ಕವನ
ನಿನೇ ಅಯುಧವಾಗು
ಅದ್ಭುತವಾದ ಕಲ್ಪನೆ
ಹೆಣ್ಣಿನ ರಕ್ಷಣೆ ಹೆಣ್ಣೆ ಮಾಡಿಕೊಳ್ಳಬೇಕು
ಚಂಡಿಯಾಗು ಭದ್ರಕಾಳಿಯಾಗು ಎನ್ನುವ ಮೂಲಕ ಹೆಣ್ಣಿಗೆ ಧೈರ್ಯ
ತುಂಬಿದ್ದಾರೆ ನಿಮ್ಮ ಸಾಹಿತ್ಯ ಕೃಷಿ ಹೀಗೇ ಸಾಗಲಿ ಎಂದು ಬಯಸುತ್ತೇನೆ

ಮಧುನಾಯ್ಕ(ಮನಾ)
ಬಸರಹಳ್ಳಿತಾಂಡ
ಹೂವಿನಹಡಗಲಿ
ಬಳ್ಳಾರಿ
9611228929
[5/25, 5:48 PM] ಚೇತನ್ ಸಾಗರ: ಅಮುಭಾವಜೀವಿ   ನಿಜ ಸರ್ ನೀವು ಭಾವನೆಗಳಿಗೆ ತುಂಬಾ ಪ್ರಾಮುಖ್ಯತೆ ನೀಡುವಂತಹವರು
[5/25, 5:52 PM] +91 99647 48108: ಭಾವಜೀವಿಗೊಂದು ಭಕ್ತಿಪೂರ್ವಕ ನಮನ

ಗುರುಗಳೇ ನಿಮ್ಮ ಪರಿಚಯ ನಿಜಕ್ಕೂ ಭಾವನಾತ್ಮಕ ಸಂಬಂಧವನ್ನು ಬೆಸೆಯುವಂತಹದ್ದು, ನಿಮ್ಮ ಸಾಹಿತ್ಯ ಸೇವೆ ಅಪಾರವಾದದ್ದು, ನಿಮ್ಮಂತಹ ಹಿರಿಯರ ಸಹಕಾರ ಸಲಹೆಗಳು ನಮ್ಮಂತಹ ಯುವ ಕವಿಗಳಿಗೆ ಸ್ಪೂರ್ತಿ, ತಮ್ಮ ಸಾಹಿತ್ಯ ಸೇವೆಗೆ ನನ್ನದೊಂದು ನಮನ, ಇನ್ನೂ ಹೆಚ್ಚಿನ ಕವನಗಳು ನಿಮ್ಮಿಂದ ಮೂಡಿ ಬರಲೆನ್ನುವುದೇ ನಮ್ಮಾಶಯ ..‌

ಕವನ : *ನೀನೆ ಆಯುಧವಾಗು*
ರಚನೆ : *ಅಮು ಭಾವಜೀವಿ*

ಹೆಣ್ಣಿನ ರಕ್ಷಣೆಗೆ ಯಾರು ಬರರು ಕಾಮುಕರ ಅಟ್ಟಹಾಸವನ್ನು ತಡೆಯಲು ನೀನೆ ಆಯುಧವಾಗಬೇಕು ಎನ್ನುವ ನಿಮ್ಮ ಪ್ರೋತ್ಸಾಹದ ನುಡಿ ಪ್ರಸ್ತುತ ಮಹಿಳೆಯಿರಿಗೆ ಎಚ್ಚೆತ್ತುಕೊಳ್ಳುವಂತಿದೆ.

ಪ್ರಸ್ತುತ ದಿನಗಳಲ್ಲಿ ನಡೆಯುವ ಹೆಣ್ಣಿನ ಮೇಲಿನ ದೌರ್ಜನ್ಯ ಕುರಿತು ಅವಳು ಅದನ್ನು ತಡೆಯಲು ಆಯುಧವಾಗಬೇಕು, ಸಾಲು ಸಾಲು ಅಮಾಯಕ ಹೆಣ್ಣಿನ ಮೇಲೆ ನಡೆದಿರುವ ಜೀವಂತ ಸಾಕ್ಷಿಗಳು ಕಣ್ಣೆದುರಿಗಿದ್ದು ಕಾನೂನಿನಿಂದ ಏನೂ ಮಾಡಲಾಗದಿದ್ದಾಗ ನಿನಗೆ ನೀನೆ ರಕ್ಷಾ ಕವಚವಾಗಬೇಕೆಂದು ತುಂಬಾ ಅರ್ಥಪೂರ್ಣವಾಗಿ ರಚಿಸಿದ್ದೀರಿ ಗುರುಗಳೇ , ನಿಮಗೆ ಅನಂತ ಅನಂತ ವಂದನೆಗಳು

*ಧನ್ಯವಾದಗಳು*

🦚 *ಹನುಮಂತ ಗೌಡ್ರು* *ಲೋಕಿಕೆರೆ*
[5/25, 6:00 PM] ಚೇತನ್ ಸಾಗರ: ನಮಸ್ತೆ ಸರ್ ಅಮುಭಾವಜೀವಿ ಸರ್ ನಿಜವಾಗಿಯೂ ನೀವು ಭಾವಜೀವಿಗಳೆ ಭಾವನೆಗಳ ಭಂಡಾರಗಳ ಪದಗಳಲ್ಲಿ ಕಥೆ ಕವಿತೆ ಕವನಗಳ ಮೂಲಕ ಎಲ್ಲಾರಿಗೂ ಚಿರಪರಿಚಿತರೂ ನೀವು  ಹೆಚ್ಚಿನದಾಗಿ ಗುರುಗಳು ಸಮಾಜಕ್ಕೆ ಉತ್ತಮ ವಿದ್ಯಾರ್ಥಿಗಳನ್ನು ಕೊಡುಗೆಯಾಗಿ ನೀಡುವ ಶಿಕ್ಷಕರೂ ಸರಸ್ವತಿ ಸುಪುತ್ರರು ಅನೇಕ ಕವಿತೆಗಳ ಬರೆದು ರಾಜ್ಯಮಟ್ಟದಲಿ ಕನ್ನಡ ಸಾಹಿತ್ಯ ಸಮ್ಮೇಳನದ ವಿಷೇಶವಾಗಿ ಸನ್ಮಾನಗಳ ಪಡೆದಂತವರು ಎಲೆ ಮರೆಯ ಕಾಯಿಯಂತಿದ್ದ ನನ್ನನು ಸಾಹಿತ್ಯ ಬಳಗಕ್ಕೆ ಪರಿಚಯಿಸಿದವರು ನಿಮ್ಮ ಸಾಹಿತ್ಯ ಸೇವೆಗಳು ಇನ್ನು ಹೆಚ್ಚಿನದಾಗಿ ಬೆಳೆಯಲಿ ನಮ್ಮ ಕನ್ನಡ ಸಾಹಿತ್ಯ ನಿಮ್ಮಿಂದ ಹೆಚ್ಚು ಬೆಳೆಯಲಿ‌ ನಿಮಗೆ ನನ್ನ‌ ಹೃದಯಪೂರ್ವಕವಾದ  ಅಭಿನಂದನೆಗಳು ನಿಮ್ಮ ಕವಿತೆಗಳಿಗೆ ನಾನು ಕೂಡ ಸಾಮನ್ಯ ಅಭಿಮಾನಿ .....
[5/25, 6:02 PM] ಚೇತನ್ ಸಾಗರ: ಹೆಣ್ಣು ಯಾರಿಗು ಹೆದರುವ ಅಗತ್ಯವಿಲ್ಲಾ ನೀನೆ ಆಯುಧವಾಗು ಎಂದು ಹೆಣ್ಣಿಗೆ ಹುರಿದುಂಬಿಸುವ ಕವಿತೆ ತುಂಬಾ ಚೆನ್ನಾಗಿ ಮೂಡಿಬಂದಿದೆ ....
[5/25, 6:18 PM] +91 70227 49472: ಅಮು ಸರ್ ನಮಸ್ಕಾರ...,ನಿಮ್ಮ ಕವಿತೆ ನೇರ ನುಡಿಗಳ ಬಾಣ,ವಾಸ್ತವಕ್ಕೆ ದರ್ಪಣ... ಹೆಣ್ಣಿನ ಮೇಲೆ ಆಗುವ ಎಲ್ಲಾ ತರಹದ ಹಿಂಸಾಚಾರ,ಅತ್ಯಾಚಾರಗಳಿಗೆ ಕೊನೆಯಿಲ್ಲದೆ ಆಗಿದೆ...ಅವರದ್ದೇ ಲೋಕದಲಿ ಇರುವ ರಾಜಕಾರಣಿಗಳು ಸಹ ಈ ವಿಷಯಗಳಿಲ್ಲ ತಲೆ ಕೆಡೆಸಿಕೊಳ್ಳದೆ ಅವರವರ ಸ್ವಾರ್ಥಕ್ಕೆ ಬಾಳುತ್ತಿರುವರು....ಇತ್ತೀಚಿಗೆ ನಿರ್ಭಯಾ ಮೇಲೆ ಅತ್ಯಾಚಾರ ಎಸಗಿದವರಿಗೆ ಗಲ್ಲು ಶಿಕ್ಷೆಯಾಗಿದೆ,ಇದು ಹೆಣ್ಣು ಸಂಕುಲಕ್ಕೆ ಸಿಕ್ಕ ಜಯ....ನಿಮ್ಮ ಕವಿತೆ ಸುಂದರ...

ಧನ್ಯವಾದಗಳು
[5/25, 6:19 PM] +91 99726 83859: ಶಿಕ್ಷಣ ಕ್ಷೇತ್ರವೆಂಬುದು ಸಾಹಿತ್ಯದ ನೀರು ಕುಡಿಯಲು ಇರುವ ಒರತೆ. ಅವಕಾಶಗಳನ್ನು ಬಾಚಿ ಅಪ್ಪಿ ಒಪ್ಪಿಕೊಂಡಿರುವ ನಿಮಗೆ ಅಭಿನಂದನೆಗಳು.

೧) ಹೆಣ್ಣು ಅಬಲೆಯಲ್ಲ ಸಬಲೆ ಎನ್ನತ್ತಾ ತೆರೆ ಮರೆಯಲ್ಲಿ ಅವಳನ್ನು ನಡೆಸಿಕೊಳ್ಳುವ ಪದ್ದತಿ ಅತ್ಯಂತ ಕ್ರೂರವಾಗಿದೆ, ಮನುಕುಲ ತಲೆ ತಗ್ಗಿಸುವ ವಿಷಯವಾಗಿದೆ. ಸಮಾನತೆ ಬರಬೇಕಾಗಿದೆ. ಪ್ರತಿಯೊಂದು ಶಾಲೆಯಲ್ಲಿ ಕರಾಟೆಯಂತಹ ಆತ್ಮ ರಕ್ಷಣಾ ಕಲೆಗಳನ್ನು ಕಲಿಸಬೇಕಾದ ಅಗತ್ಯತೆ ಇದೆ. ಸ್ವ ರಕ್ಷಣಾ ಆಯುಧವನ್ನಾಗಿ ಬೆಳೆಸಬೇಕಾಗಿದೆ. ತನ್ನ ಜೀವನದ ಎಲ್ಲಾ ಹಂತಗಳಲ್ಲಿ ಪುರುಷರ ರಕ್ಷಣೆಯಲ್ಲಿ ಬೆಳೆಯಬೇಕಾಗಿದೆ. ಏಕೆಂದರೆ ನಮ್ಮ ಸಮಾಜ ಅತೀ ನೀಚ ವ್ಯಕ್ತಿಗಳ ಮಿಶ್ರಿತವಾಗಿದೆ.

ಈ ಅಮಾನುಷ ಕೃತ್ಯದ ತಡೆಯಲು ನಮ್ಮ ಕಾನೂನು ವ್ಯವಸ್ಥೆ ಅಸಮರ್ಥವಾಗಿದೆ. ಹಣಬಲ, ಅಧಿಕಾರ ಬಲಕ್ಕನುಗುಣವಾಗಿ ನ್ಯಾಯ ಮಾರಾಟವಾಗುತ್ತಿದೆ. ಅತ್ಯಾಚಾರಿಗಳು ಕೆಲವೇ ವರ್ಷದಲ್ಲಿ ಕಂಬಿಯಿಂದಾಚೆ ಬಂದು ಸಂತ್ರಸ್ತರ ಮನೆಯ ಮುಂದೆ ಕೇಕೆ ಹಾಕುತ್ತಿದ್ದಾರೆ.

೨) ಅಂಬೇಡ್ಕರ್ ರವರ ಒಂದು ಮಾತು "ಪ್ರಜೆಗಳು ತಮ್ಮ ಹಕ್ಕನ್ನು ಸಮರ್ಪಕವಾಗಿ ಬಳಸುವ ಅರಿವು ಅವರಲ್ಲಿ ಬಂದಾಗ ಭ್ರಷ್ಟಾಚಾರಿಗಳು ತೆರೆ ಮರೆಗೆ ಸರಿಯುತ್ತಾರೆ." ಹಕ್ಕುಗಳ ಅರಿವು ನಮಗೆ ಅಗತ್ಯ, ಯೋಗ್ಯತೆಗೆ, ಸದೃಢ ಭಾರತದ ನಿರ್ಮಾಣಕ್ಕೆ ನಮ್ಮ ಮತದಾನದಲ್ಲಿ ಅಡಗಿದೆ..!!

ನಿಮ್ಮ ಕಾವ್ಯ ಕೌಶಲ್ಯಕ್ಕೆ ಕೋಟಿ ನಮನಗಳು ಸರ್🙏🙏💐💐
[5/25, 6:51 PM] +91 88613 37666: ನಮಸ್ಕಾರ ಅಮುಭಾವಜೀವಿಯವರೆ ನಿಮ್ಮ ಪರಿಚಯ ನಮಗೆ ಚಿರವಾದದ್ದು, ನಿಮ್ಮೀ ಹೆಣ್ಣಿನ ಶೋಷಣೆಯ ಕುರಿತು ರಚಿಸಿರುವ ಕವನ ಅಮೋಘ ಹೆಣ್ಣು ತ್ರೇತಯುಗದಿಂದಿಡಿದು ಇಂದಿನ ಕಲಿಯುಗದಲ್ಲು ಈ ಕಾಮಪಿಶಾಚಿಗಳ ದುಷ್ಕೃತ್ಯಕ್ಕೆ ಒಳಗಾಗುತ್ತಲೇ ಇದ್ದಾಳೆ ಅಂತಹ ಕಾಮಲೆಯುಕ್ತ ಕಣ್ಣುಗಳ ಬೇರುಸಮೆತ ಕಿತ್ತು ಹಾಕಿದರೆ ಮುಂದಿನ ದಿನಗಳಲ್ಲಾದರೂ ಕೊಂಚ ಕಡಿಮೆಯಾಗಬಹುದೆನೊ ಈ ದುರ್ಗಟನೆಗಳು,
ಎರಡೂ ಕವನಗಳು ತುಂಬಾ ಸೊಗಸಾಗಿ ಮೂಡಿವೆ ಸರ್, ಮತ್ತೊಮ್ಮೆ ಶುಭವಾಗಲಿ , ನಮಸ್ಕಾರ
[5/25, 6:56 PM] +91 97434 58860: ಅಮು ಸರ್ ಗೆ ನನ್ನ ನಮನಗಳು. ನಿಮ್ಮ ಸಾಹಿತ್ಯ ಕೃಷಿ ಸುಂದರ ಹಾಗೂ ಹದವಾಗಿದ್ದು ತುಂಬಾ ಚನ್ನಾಗಿ ಕವನ ಬರೆಯುತ್ತಿರಿ ನಿಮಗೆ ನನ್ನ ಮೊದಲ ನಮನಗಳು

ಕಾವ್ಯ ವಿಮರ್ಶೆ

೧) ನೀನೇ ಆಯುಧವಾಗು

ಹೆಣ್ಣಿಗೆ ಶತಶತಮಾನಗಳಿಂದಲೂ ಶೋಷಣೆ ಆಗುವುದು ತಪ್ಪಿಲ್ಲ ಅದು ಮುಂದುವರೆದುಕೊಂಡೆ ಬರುತ್ತಿದೆ. ಜ್ಞಾನವಂತಿಕೆ ಬೆಳೆದಂತೆಲ್ಲ ಕ್ರೌರ್ಯ ಹೆಚ್ಚುತ್ತಲೇ ಇದೆ. ಹೆಣ್ಣಿಗೆ ಸ್ವಾತಂತ್ರ್ಯ ವಿಲ್ಲದಾಗಿದೆ ಅದಕ್ಕಾಗಿ ಕೆಟ್ಟ ಕಾಮುಕರ ನಿರ್ನಾಮಕ್ಕೆ ಯಾರ ಸಹಾಯ ಕಾಯುತ್ತ ಕೂರಬೇಡ ಅದಕ್ಕಾಗಿಯೆ ನಿನ್ನ ಮೇಲಿನ ದೌರ್ಜನ್ಯ ಕಡಿಮೆ ಆಗುತ್ತಿಲ್ಲ ಅದಕ್ಕೆ ನೀನೆ ಆಯುಧವಾಗು ಸಂಚಾರಕ್ಕೆ ಸಿದ್ದಳಾಗು ಎಂದು ಹೆಳುತ್ತ ಹೆಣ್ಣು ಅಬಲೇ ಅಲ್ಲ ಸಬಲೆ ಅನ್ನುವುದನ್ನು ಬಹು ಮಾರ್ಮಿಕಬಾಗಿ ತಿಳಿಸಿದ್ದಾರೆ

೨) ಎಚ್ಚೆತ್ತುಕೊಳ್ಳುವ ಕಾಲ

ರಾಜಕೀಯ ಸ್ಥಿತಿಗತಿಗಳ ಅವಲೋಕನವಿದೆ. ರಾಜಕೀಯ ನಾಯಕರು ಆಯ್ಕೆ ಆಗುವವರೆಗೆ ಬರವಸೆಗಳ ಮಳೆ ಸುರಿಸಿ ಕಾಲಿಗೆ ಬಿದ್ದು ಬೆಳೆಬೆಯಿಸಿಕೊಂಡು ಅಧಿಕಾರ ಹಿಡಿದು ಅಹಂಕಾರದಿ ಮೆರೆಯುತ್ತಾರೆ ಸರಿಯಾದ ನಾಯಕನ ಆಯ್ಕೆ ನಿನ್ನದಾಗಲಿ ಸುಭದ್ರ ರಾಷ್ಟ್ರದ ಹೊಣೆ ನಿನ್ನದಾಗಿರಲಿ ಎಂದು ಎಚ್ಚರಿಸಿದ್ದಾರೆ

ಸರ್ ತಮ್ಮ ಕವನಗಳು ತುಂಬಾ ಸುಂದರವಾಗಿ ಮೂಡಿಬಂದಿವೆ ಧನ್ಯವಾದಗಳು ಸರ್

ಮಂಜುನಾಥ, ಹ ಕಿತ್ತೂರ ಹುಬ್ಬಳ್ಳಿ
[5/25, 6:57 PM] +91 97434 58860: ಅಮು ಸರ್ ಗೆ ನನ್ನ ನಮನಗಳು. ನಿಮ್ಮ ಸಾಹಿತ್ಯ ಕೃಷಿ ಸುಂದರ ಹಾಗೂ ಹದವಾಗಿದ್ದು ತುಂಬಾ ಚನ್ನಾಗಿ ಕವನ ಬರೆಯುತ್ತಿರಿ ನಿಮಗೆ ನನ್ನ ಮೊದಲ ನಮನಗಳು

ಕಾವ್ಯ ವಿಮರ್ಶೆ

೧) ನೀನೇ ಆಯುಧವಾಗು

ಹೆಣ್ಣಿಗೆ ಶತಶತಮಾನಗಳಿಂದಲೂ ಶೋಷಣೆ ಆಗುವುದು ತಪ್ಪಿಲ್ಲ ಅದು ಮುಂದುವರೆದುಕೊಂಡೆ ಬರುತ್ತಿದೆ. ಜ್ಞಾನವಂತಿಕೆ ಬೆಳೆದಂತೆಲ್ಲ ಕ್ರೌರ್ಯ ಹೆಚ್ಚುತ್ತಲೇ ಇದೆ. ಹೆಣ್ಣಿಗೆ ಸ್ವಾತಂತ್ರ್ಯ ವಿಲ್ಲದಾಗಿದೆ ಅದಕ್ಕಾಗಿ ಕೆಟ್ಟ ಕಾಮುಕರ ನಿರ್ನಾಮಕ್ಕೆ ಯಾರ ಸಹಾಯ ಕಾಯುತ್ತ ಕೂರಬೇಡ ಅದಕ್ಕಾಗಿಯೆ ನಿನ್ನ ಮೇಲಿನ ದೌರ್ಜನ್ಯ ಕಡಿಮೆ ಆಗುತ್ತಿಲ್ಲ ಅದಕ್ಕೆ ನೀನೆ ಆಯುಧವಾಗು ಸಂಚಾರಕ್ಕೆ ಸಿದ್ದಳಾಗು ಎಂದು ಹೆಳುತ್ತ ಹೆಣ್ಣು ಅಬಲೇ ಅಲ್ಲ ಸಬಲೆ ಅನ್ನುವುದನ್ನು ಬಹು ಮಾರ್ಮಿಕಬಾಗಿ ತಿಳಿಸಿದ್ದಾರೆ

೨) ಎಚ್ಚೆತ್ತುಕೊಳ್ಳುವ ಕಾಲ

ರಾಜಕೀಯ ಸ್ಥಿತಿಗತಿಗಳ ಅವಲೋಕನವಿದೆ. ರಾಜಕೀಯ ನಾಯಕರು ಆಯ್ಕೆ ಆಗುವವರೆಗೆ ಬರವಸೆಗಳ ಮಳೆ ಸುರಿಸಿ ಕಾಲಿಗೆ ಬಿದ್ದು ಬೆಳೆಬೆಯಿಸಿಕೊಂಡು ಅಧಿಕಾರ ಹಿಡಿದು ಅಹಂಕಾರದಿ ಮೆರೆಯುತ್ತಾರೆ ಸರಿಯಾದ ನಾಯಕನ ಆಯ್ಕೆ ನಿನ್ನದಾಗಲಿ ಸುಭದ್ರ ರಾಷ್ಟ್ರದ ಹೊಣೆ ನಿನ್ನದಾಗಿರಲಿ ಎಂದು ಎಚ್ಚರಿಸಿದ್ದಾರೆ

ಸರ್ ತಮ್ಮ ಕವನಗಳು ತುಂಬಾ ಸುಂದರವಾಗಿ ಮೂಡಿಬಂದಿವೆ ಧನ್ಯವಾದಗಳು ಸರ್

ಮಂಜುನಾಥ, ಹ ಕಿತ್ತೂರ ಹುಬ್ಬಳ್ಳಿ
[5/25, 7:07 PM] +91 82775 91731: ಅಮುಭಾವಜೀವಿಯವರ ನೀನೇ ಆಯುಧವಾಗು ಕವನ ಹೆಣ್ಣು ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬುವ ಕವನವಾಗಿದೆ ಇತ್ತೀಚೆಗೆ ಸರ್ಕಾರವು ಒಂಬತ್ತನೇ ತರಗತಿ ಹೆಣ್ಣು ಮಕ್ಕಳಿಗೆ ಕರಾಟೆ ತರಬೇತಿ ನೀಡುತ್ತಿರುವುದನ್ನು ಸ್ಮರಿಸಬಹುದು ಅಮುಭಾವಜೀವಿಯವರ ಅನೇಕ ಕವನ ಓದಿ ದ್ದೇನೆ ಉತ್ತಮವಾಗಿ ವೆ ಇನ್ನು ಹೆಚ್ಚು ಕವನಗಳನ್ನು ಅವರು ಬರೆಯುವಂತಾಗಲಿ
ಶಾಂತಾ ಪುತ್ತೂರು
[5/25, 7:27 PM] +91 89716 54225: ನಮಸ್ಕಾರ ಸರ್ ನಿಮ್ಮ ಸಾಹಿತ್ಯ ಕೃಷಿಯ ಕಾರ್ಯವು ಅತಿ ಸುಂದರ ಮತ್ತು ಅಮೋಘ ಓದುಗರ ಮನಸಿಗೆ ಆಹ್ಲಾದಕರವಾದ ವಿಷಯ ವಸ್ತು ಅಷ್ಟೇ ಅಲ್ಲದೆ ಗೇಯವನ್ನು ಹೊಂದಿರುತ್ತದೆ......🙏

ಇನ್ನೂ ಕವಿತೆಗಳ ಬಗ್ಗೆ ಹೇಳುವುದಾದರೆ ಅಬ್ಬ ಗ್ರೇಟ್ ಸರ್ ನೀವು ಏಕೆಂದರೆ ಹೆಣ್ಣು ಬದುಕಿದ್ದಾಗ ಗೊಗರೆದು ಬೊಬ್ಬಿರಿಸಿ ಕಬ್ಬು ಹಿಂಡಿ ಹಾಲು ಕುಡಿಯಲು ಮುಂದಾಗಿ ಅಮಾಯಕಳ ಜೀವ ಬಲಿದಾನ ಪಡೆದ ನಂತರ ಮೇಣದ ಬತ್ತಿ ಹಿಡಿದು ನ್ಯಾಯಕ್ಕಾಗಿ ಹೋರಾಡುವ ಈ ಮೌಡ್ಯ ಸಮಾಜದಲ್ಲಿ ನೀ ಯಾರನ್ನು ನಂಬ ಬೇಡ ,,,,ಹೆಣ್ಣು ಅಬಲೇ ಅಲ್ಲ ಸಬಲೆ ಎಂಬ ಬಣ್ಣದ ಕುಂಚಗಳಲ್ಲಿ ಮರೆಯಾಗದಿರು ಹೆಣ್ಣೇ ...ಎಂದೆಂದಿಗೂ ನೀ ಅಬಲೆ ಅಲ್ಲ ಸಬಲೆ ಎಂಬ ಮಂತ್ರ ಮರೆಯದೆ ನಿನ್ನ ಉಳಿವಿಗಾಗಿ ನಿನೇ ಆಯುಧ ವಾಗು ಎಂದು ಸಾಮಾಜಿಕ ಕಳಕಳಿಯನ್ನು ಸ್ತ್ರೀ ರಕ್ಷಣೆಯ ಆತ್ಮ ಬಲವನ್ನು ಹೆಚ್ಚಿಸಿದ್ದಿರಿ .....
ನಿಮಗೆ ಶುಭವಾಗಲಿ ಸರ್
       ಸಾಮಾಜಿಕ ಕಳಕಳಿಯ ಉತ್ತಮ ಗುಣಮಟ್ಟದ ಕವನ ನಿನಗೆ ನೀನೆ ಆಯುಧ

🙏🙏🙏🙏
[5/25, 7:37 PM] ರಂಗನಾಥ್ ದೇವರಹಳ್ಳಿ: ನಮ್ಮನೆಯ ಹಿರಿಯ ಅಥಿತಿ... *"ಅಮುಭಾವಜೀವಿ"* ಕಾವ್ಯನಾಮಾಂಕಿತ *"ಅಪ್ಪಾಜಿ ಎಂದು ಮತ್ತೂರು"* ರವರು ವೃತ್ತಿಯಲ್ಲಿ ಶಿಕ್ಷಕರಾದರೂ ಪ್ರವೃತ್ತಿಯಲ್ಲಿ ಸಾಹಿತಿಗಳಾಗಿ ಕನ್ನಡ ಸೇವೆ ಸಲ್ಲಿಸುತ್ತಿದ್ದಾರೆ.. ಸರ್ ನಿಮ್ಮ ಸೇವೆಯನ್ನು ನೋಡಿದರೆ ನಿಜವಾಗಿಯೂ ಹೆಮ್ಮೆ ಎನಿಸುತ್ತದೆ... ಸತ್ಸಂಗ ಸತ್ ವ್ಯಕ್ತಿಗಳ  ಸಹವಾಸ ಸದಾಚಾರ ಸತ್ಯದತ್ತ ಕೊಂಡೊಯ್ಯುತ್ತದೆ... ನಿಮ್ಮ ಸಲಹೆ ಮಾರ್ಗದರ್ಶನ ನಮ್ಮಂತಹ ಕಿರಿಯರಿಗೆ ಮಾದರಿಯಾಗುತ್ತದೆ...

ಕರ್ನಾಟಕವನ್ನೇ ಸುತ್ತಿ ಸಾಹಿತ್ಯ ಸೇವೆಗೈದಿರುವಿರಿ... ನಿಮ್ಮ ಯಶಸ್ಸು ಹೀಗೇ ಮುಂದುವರಿಯಲಿ... ಎಂದು ಆಶಿಸುವೆ...

*"ಕವನ ವಿಮರ್ಶೆ"*
೧. *"ನೀನೇ ಆಯುಧವಾಗು "*

ಒಂದು ಅದ್ಭುತ ಕವನ... ಸಮಾಜದಲ್ಲಿ ತಾಂಡವನೃತ್ಯಗೈಯುತ್ತಿರುವ ಪೈಶಾಚಿಕ ಸಮಸ್ಯೆಯಾದ *" ಅತ್ಯಾಚಾರ "* ಕುರಿತ ಕವನ ಮನಸೋರೆಗೊಳ್ಳುತ್ತದೆ.

ಎಂತಹಾ ಕಾನೂನು ತಂದರೂ ಬರೀ ಕಾಗದದಲ್ಲಿ... ಮರುಕಪಡುವವರ ಬಾಯಿಯಲ್ಲಿ... ನರಕದಲ್ಲೂ ಕಾಮಬೀಜ ಬಿತ್ತುವವರು ಕಲಿಯುಗದ ಕಲಿಗಳು... ಭದ್ರಕಾಳಿಯಾಗಲೇಬೇಕು... ದುಷ್ಟಸಂಹಾರಕೆ ಅವತರಿಸಲೇಬೇಕು ಆಂತರ್ಯದಲ್ಲಿರುವ ದುರ್ಗೆ ಹೊರಬರಲೇಬೇಕು... ಎಂಬ ಭಾವಾರ್ಥದೊಂದಿಗೆ ಕವನ ಚಂದವಿದೆ..

೨. *" ಎಚ್ಚೆತ್ತುಕೊಳ್ಳುವ ಕಾಲ"*

ವಾವ್ ಸಂದೇಶಯುಕ್ತ ಕವನ... ಹೌದು ಅಧಿಕಾರದಲ್ಲಿರುವ ಅಮಲೇರಿ ನಿಂತಿರುವ ನಮ್ಮನ್ನಾಳಲು ನಮ್ಮಿಂದಲೇ ಆಯ್ಕೆಯಾಗಿ ಹೋದವರು... ಇಂದು ಕುರುಡರಾಗಿದ್ದರೆ, ಕಿವುಡರಾಗಿದ್ದಾರೆ, ಮೂಕರಂತೂ ಆಗಿಲ್ಲ..... ಸುಮ್ಮನೇ ಸುಳ್ಳಿನ ಕಂತೆ ಕಂತೆ ಪುರಾಣದ ಇತಿಹಾಸ ನಿರ್ಮಿಸುತ್ತಿದ್ದಾರೆ... ಎಲ್ಲಾ ತಿಳಿದ ನಾವು ಕಣ್ಣು ಬಾಯಿ ಬಿಟ್ಟು ಕೈಕೈಹಿಸುಕಿಕೊಳ್ಳಬೇಕಾಗಿದೆ. ಇಂದಾದರೂ ಎಚ್ಚೆತ್ತುಕೊಳ್ಳುವ ಕಾಲ ಬಂದಿದೆ.. ಎಚ್ಚೆತ್ತಕೊಳ್ಳಿ ಎಂಬ ಸಂದೇಶದೊಂದಿಗೆ ಕವನ ಚಂದವಿದೆ...

No comments:

Post a Comment