[5/25, 9:23 PM] +91 98453 23036: ಅಮುಭಾವಜೀವಿ ಅವರಿಗೆ ಅಭಿನಂದನೆಗಳು...
ನಿಮ್ಮ ಸಾಧನೆ ನನಗೆ ಸಂತೋಷತಂದಿತು𒒷?ಸಾವಿರದ ಕವಿ ಎಂದೇ ನನಗೆ ಪರಿಚಿತರಾದವರು ನೀವು.... ನಿಮ್ಮ ಕವಿತೆ
'ನೀನೇ ಆಯುಧವಾಗು'---ಇಡೀ ಕವಿತೆಯ ಸಂದೇಶವನ್ನು ಶೀರ್ಷಿಕೆಯೇ ನೀಡಿದೆ...ಎಲ್ಲಾ ಮುಗಿದ ಮೇಲೆ ಮೇಣದಬತ್ತಿ ಹಚ್ಚಿ, ಅಶ್ರುತರ್ಪಣ,
ಶ್ರದ್ಧಾಂಜಲಿ...ತಪ್ಪಲ್ಲ..ಆದರೆ ಪರಿಹಾರ ,ನ್ಯಾಯ ಯಾರಿಗೆ?? ನಿಮ್ಮ ಕವಿತೆ ಹೆಣ್ಣಿನ ಬಗ್ಗೆ ನಿಮಗಿರುವ ಕಾಳಜಿಯ ದ್ಯೋತಕ..ಕಳಕಳಿಯ ಆದೇಶ....ಧನ್ಯವಾದಗಳು ತಮಗೆ..🙏.
'ಎಚ್ಚೆತ್ತು ಕೊಳ್ಳುವ ಕಾಲ'..ಮೇಲೆ ಏರಿದಮೇಲೆ ಏಣಿ ಏಕೆ? ಎನ್ನುವ ಕಾಲ ಇದು..ಏಣಿಯಾದವರು ತಾವಿತ್ತ ಸಹಕಾರವನ್ನೇ ಮರೆಯಬೇಕಿದೆ.
ನಿಮ್ಮ ಸಾಂದರ್ಭಿಕ ಕವನಕ್ಕೆ ಅಭಿನಂದನೆಗಳು...
ತಡವಾದ ಪ್ರತಿಕ್ರಿಯೆಗೆ ಅನ್ಯಥಾ ಭಾವಿಸದಿರಿ....
ಕಾರ್ಯಬಾಹುಳ್ಯದಿಂದ ಬಿಡುವಾದದ್ದು ಈಗ..
[5/25, 9:46 PM] ಚಂದ್ರಕಾಂತ: ಅಮು ಭಾವಜೀವಿ ಸರ್ ರವರಿಗೆ ಧನ್ಯವಾದಗಳು💐
ಅಮು ಭಾವಜೀವಿ(ಅಪ್ಪಾಜಿ ಮುಸ್ಟೂರು) ಸರ್ ರವರು ನನಗೆ ತುಂಬಾ ಆತ್ಮೀಯರು ಹಾಗೂ ನನಗೆ ಸದಾ ಮಾರ್ಗದರ್ಶಕರಾಗಿದ್ದಾರೆ. ಸಾವಿರಾರು ಭಿನ್ನ-ವಿಭಿನ್ನ ಕವಿತೆಗಳನ್ನು ಬರೆದು ಕನ್ನಡ ನಾಡಿನ ತುಂಬಾ ಅಮು ಭಾವಜೀವಿ ಕಾವ್ಯನಾಮದೊಂದಿಗೆ ಚಿರ ಪರಿಚಿತರೆನಿಸಿದ್ದಾರೆ.
ಅಮು ಭಾವಜೀವಿ ಸರ್ & ನಾನು ಇಬ್ಬರೂ ಕೂಡ ಜಗಳೂರು ತಾಲ್ಲೂಕಿನವರು.ಅವರು ಒಂದು ರೀತಿಯಲ್ಲಿ ಎಲೆ ಮರೆಯ ಕಾಯಿಯಂತೆ ಇರಲು ಬಯಸುವವರು. ಸಾವಿರಾರು ಕವಿತೆಗಳನ್ನು ಬರೆದರೂ ಒಂದೂ ಕವನ ಸಂಕಲನ ವಾಗಿ ಪುಸ್ತಕ ಹೊರಗೆ ತಾರದೆ ಇರುವುದು ನನ್ನಂತಹ ಅವರ ಹಿತೈಷಿಗಳಿಗೆ ನಿರಾಸೆಯಾಗಿದೆ.ಅತೀ ಶೀಘ್ರದಲ್ಲಿ ಅವರ ಕವನ ಸಂಕಲನಗಳೂ ಬಿಡುಗಡೆಗೊಂಡು ಓದುಗರ ಕೈಗೆ ಸಿಗಲಿ ಎಂಬುದು ನಮ್ಮೆಲ್ಲರ ಆಶಯವಾಗಿರುತ್ತದೆ.
ಅಮು ಭಾವಜೀವಿ ಸರ್ ರವರು ಸ್ನೇಹಜೀವಿ,ಅಹಂಕಾರವಿಲ್ಲದ ಹೃದಯವಂತರು,ಅಜಾತ ಶತೃವಾಗಿ ಸಾಕಷ್ಟು ಜನ ಮಾನಸದಲ್ಲಿ ಜಾಗ ಪಡೆದಿದ್ದಾರೆ.
ಅಮು ಭಾವಜೀವಿ ಯವರ ಪ್ರತಿಯೊಂದು ಕವನಗಳನ್ನೂ ನಾನು ಆಗಿಂದಾಗಲೇ ಫೇಸ್ ಬುಕ್,ವಾಟ್ಸಾಪ್ ಹಾಗೂ ಯೂಟ್ಯೂಬ್ ಚಾನೇಲ್ ನಲ್ಲಿ ಓದಿ ಮೆಚ್ಚುಗೆ ತಿಳಿಸಿರುತ್ತೇನೆ.ಅವರ ಬಹುತೇಕ ಕವನಗಳು ಸೊಗಸಾಗಿದ್ದು ನನ್ನ ಮನ ಗೆದ್ದಿವೆ.
ಅಮು ಭಾವಜೀವಿ ಸರ್ ರವಿಗೆ ಶುಭಾಶಯ ಕೋರುತ್ತಿದ್ದೇನೆ.
ಜೈ ಕನ್ನಡಾಂಬೆ ಜೈ ಜಗಳೂರು
->ಚಂದ್ರ ಕಾಂತ.ಹೆಚ್.
-ಜಗಳೂರು.
[5/25, 9:55 PM] +91 95913 82465: ಭಾವನಾ ಲೋಕದ ಮೇರು ಪ್ರತಿಭೆಗಳಾದ ಕವಿಗಳಿಗೆ ನನ್ನ ನಮನಗಳು..ಕ್ಷಮಿಸಿ ಕಾರ್ಯಗಳ ಒತ್ತಡದಿಂದ ತಡವಾಗಿ ಪ್ರತಿಕ್ರಿಯಿಸುತ್ತಿದ್ದೆನೆ.
ನಾನು ನಿಮ್ಮ ಕವನಗಳ ಓದುಗ.ನಮ್ಮ ರಾಮದುರ್ಗಕ್ಕೆಬಂದಾಗ ತಮ್ಮನ್ನು ನೋಡಿದ್ದೆ..ಅಷ್ಟೇ ಆಗಿನ್ನೂ ಪರಿಚಿತರಾಗಿರಲಿಲ್ಲ.ನಿಮ್ಮ ಎಲ್ಲ ಸಾಹಿತ್ಯದ ಹಾದಿ ಸಾಗಲಿ ಎಂದು ಕೇಳಿಕೊಳ್ಳುತ್ತೆನೆ..🙏
No comments:
Post a Comment