ಶಾಲೆಯ ಕದ ತೆರೆಯಿತು
ರಜೆಯ ಮಜವು ಮುಗಿಯಿತು
ಸಮವಸ್ತ್ರವ ತೊಟ್ಟು ಬನ್ನಿ
ಪಾಠಿಚೀಲ ಹೆಗಲಿಗೇರಿಸಿಕೊಂಡು ಬನ್ನಿ
ಸಿಂಗಾರಗೊಂಡಿದೆ ಶಾಲಾವರಣ
ಮತ್ತೆ ಸೇರೋಣ ಸಡಗರದಿಂದ
ಹೊಸ ಪುಸ್ತಕ ಬಟ್ಟೆ ಪಡೆದು
ಬಿಸಿಯೂಟವ ಸವಿಯೋಣ ಬನ್ನಿ
ಅಜ್ಜಿ ಮನೆಯ ನೆನಪು ಹೊತ್ತು
ಅಜ್ಜನ ಹೇಗಲಿರಿದ ಗಮ್ಮತ್ತು
ಅತ್ತೆಮಾವಂದಿರ ಜೊತೆಯ ತುಂಟಾಟ
ಎಲ್ಲಾ ಬಿಟ್ಟು ಶಾಲೆಗೀಗ ಓಡೋಡಿ ಬನ್ನಿ
ಗುರುಗಳ ಭಯವು ಈಗಿಲ್ಲ
ನಿಮ್ಮನು ಮುದ್ದಿಸುವರು ಅವರೆಲ್ಲ
ವಿದ್ಯೆಯ ಕಲಿತು ಬುದ್ದಿವಂತರಾಗಲು
ನಲಿಯುತ ಕುಣಿಯುತ ಶಾಲೆಗೆ ಬನ್ನಿ
ಸ್ನೇಹಿತರೊಂದಿಗೆ ಮತ್ತೆ ಸೇರಿ
ಆಟಪಾಠದಿ ಒಟ್ಟಿಗೆ ಕೂಡಿ
ಹೊಸ ಹೊಸ ವಿಷಯಗಳ
ಕಲಿತು ಬೀಗಲು ಶಾಲೆಗೆ ಬನ್ನಿ
0642ಎಎಂ25052019
ಅಮು ಭಾವಜೀವಿ
No comments:
Post a Comment