*ಭಾವಯಾನ ೭*
ಮೊದಲ ಮಳೆ ಬಂದ
ಸಂಭ್ರಮದಲ್ಲಿ ಇಳೆ ಮಿಂದು
ತಣ್ಣನೆಯ ಹಿತಾನುಭವದಿ
ನೆನೆದ ಹಸಿ ಮಣ್ಣ ಘಮಲು
ಸುತ್ತೆಲ್ಲ ಹರಡಿರಲು
ಹೊಸ ಜೀವಕಳೆ ಪಡೆದ
ನಿಸರ್ಗದ ಈ ಭಾವಯಾನ
ಸದಾ ನಿತ್ಯ ನೂತನ
ಪ್ರಕೃತಿ ಮಡಿಲಲ್ಲಿ ಕೂತು
ಆಸ್ವಾದಿಸುವ ಮನಕೆ
ದಿನದಾರಂಭವೊಂದು ಸತ್ಯ ದರ್ಶನ
0624ಎಎಂ25052019
*ಅಮು ಭಾವಜೀವಿ*
No comments:
Post a Comment