Friday, June 14, 2019

*ಭಾವಯಾನ ೬*

ಹಸಿರ ಬಸಿರ ಮರೆಯಿಂದ
ಉಲಿವ ಗಾನದಿಂಪಿಂದ
ಮುಂಜಾನೆಗೊಂದು ಶುಭಸೂಚಕ
ಮೊಗ್ಗು ಬಿರಿದರಳುವಾಗ
ಭೃಂಗದಿಂಪು ಸಂಗೀತ ರಾಗ
ದಿನದಾರಂಭಕೆ ಶುಭಕಾರಕ
ಭಾವಯಾನ ಹೊರಟ ಮನಕೆ
ನವಿಲನಾಟ್ಯ ಕಂಡ ಸೊಗಸಿಗೆ
ನಿಸರ್ಗ ತಾಣವಿದು ಪ್ರೇರಕ
ಎದೆಯ ಭಾವಗಳ ಚಿತ್ತಾರ
ಬಣ್ಣ ಬಣ್ಣದ ಚಿಟ್ಟೆ ಸಡಗರ
ದಿನದ ಪಯಣಕೆ ಸ್ಫೂರ್ತಿದಾಯಕ

0653ಎಎಂ24052019
*ಅಮು ಭಾವಜೀವಿ*

No comments:

Post a Comment