Friday, June 14, 2019

*ಅಮರ ಪ್ರೇಮಿಗಳು*

ಈ ತಂಪಾದ ವೇಳೆಯಲಿ
ಮುಸ್ಸಂಜೆಯ ಹೊತ್ತಲ್ಲಿ
ನಿನ್ನ ನೆನಪು ಕಾಡಿದೆ ಗೆಳತಿ
ದೂರದಲಿಳಿವ ಕತ್ತಲ ಜೊತೆ
ಮೂಡುವ ಮಿನಗೋ ತಾರೆಗಳಂತೆ
ಒಂದೊಂದೇ ಕಾಡಿವೆ ಗೆಳೆಯ

ನೀನು ಸಂಜೆ ಮಲ್ಲಿಗೆ
ಬರುವೆ ನಾ ನಿನ್ನ ಬಳಿಗೆ
ಚಂದಿರನು ಬಂದಂತೆ
ಸಾಗರದ ಅಲೆಗಳಂತೆ
ಸ್ಪರ್ಶ ಸವಿವ ತೀರದಂತೆ
ನಿನಗಾಗಿ ಕಾದಿರುವೆ ನಲ್ಲ

ನಮಗೇಕೆ ನಾಳೆಯ ಚಿಂತೆ
ಸುಖಿಸೋಣ ಪ್ರೇಮಿಗಳಂತೆ
ಈ ರಾತ್ರಿ ಮಧುಚಂದ್ರದ ಜೊತೆ
ಭಯವಿಲ್ಲ ನಲ್ಲ ನೀನಿರಲು
ನಿನ್ನ ತೋಳಲಿ ಬಂಧಿಯಾಗಿರಲು
ಸ್ವರ್ಗ ಸಮಾನವೀ ಇರುಳು

ಇರೋಣ ನಾವು ಎಂದೆಂದೂ ಹೀಗೆ
ಬೇಡ ಬದುಕಲ್ಲಿ ವಿರಹದ ಬೇಗೆ
ನಗು ನಗುತ ಇರೋಣ ಗಂಧರ್ವರಂತೆ
ಬಾಳ ಕೊಳದಲ್ಲಿ ಮುದದಿ ಈಜುತ್ತಾ
ಉಲ್ಲಾಸದ ಅಲೆಯಲ್ಲಿ ಮೆಲ್ಲ ತೇಲುತ್ತಾ
ಜಗ ಮರೆಯೋಣ ಅಮರ ಪ್ರೇಮಿಗಳಂತೆ

0634ಪಿಎಂ23052019
*ಅಮು ಭಾವಜೀವಿ*

ವಸಂತ ಅವರ ಪ್ರತಿಕ್ರಿಯೆ

+91 98447 57525: ಮುಸಂಜೆ ಹೊತ್ತಲ್ಲಿ ಮಧುರವಾದ ಪ್ರೇಮಿಗಳನ್ನ ಉಲ್ಲಾಸದ ಅಲೆಯಲ್ಲಿ ತೆಲಿಸಿದ್ದಿರಾ! 👌🏼ಸರ್

ಶರಶ್ಚಂದ್ರ ಅವರ ಪ್ರತಿಕ್ರಿಯೆ

ಪ್ರೇಮಗವಿತೆಯಲ್ಲಿ,ಮತ್ತು ಭಾವಗೀತೆಯಲ್ಲಿ ಲೀನವಾಗಿದ್ದೀರಿ ಗೆಳೆಯ.ಒಳ್ಳೆಯ ರಸಿಕರು ನೀವು.

ಆಶಾದೇವಿ ಕೂಬಾ ಅವರ ಪ್ರತಿಕ್ರಿಯೆ

ಪ್ರೇಮಗವಿತೆಯಲ್ಲಿ,ಮತ್ತು ಭಾವಗೀತೆಯಲ್ಲಿ ಲೀನವಾಗಿದ್ದೀರಿ ಗೆಳೆಯ.ಒಳ್ಳೆಯ ರಸಿಕರು ನೀವು.

ಸರಿತಾ ಗುಬ್ಬಿ ಅವರ ಪ್ರತಿಕ್ರಿಯೆ
ಏನ್ ಗುರುಗಳೆ ಒಮ್ಮೊಮ್ಮೆ ಹುಡುಗಿನೂ ಆಗ್ತಿರಾ ಒಮ್ಮೊಮ್ಮೆ ಹುಡುಗಾನೂ ಆಗ್ತಿರಾ ಕವನ ಸೂಪರ್ 👌👌👌👌

No comments:

Post a Comment