*ಭಾವಯಾನ ೫*
ಬರಿ ಬಾನಲ್ಲಿ ಮೋಡಗಳ ಚಿತ್ತಾರ
ಮೂಡಣದಿ ಕಿರಣ ಶೃಂಗಾರ
ಹೊನ್ನ ತೇರನೇರಿ ಬರಲು ಭಾಸ್ಕರ
ಅಂಟಿದೆಲೆಗಳ ಬಿಚ್ಚುತ
ಬಿರಿದ ಮೊಗ್ಗುಗಳರಳಿಸಿ
ಮಂಜಿನಲಿ ಮೊಗವ ತೊಳೆದ ನಿಸರ್ಗ
ಪ್ರಕೃತಿಯ ಈ ಭಾವಯಾನ
ಸವಿಯಲು ಮುಂಜಾನೆಯೊಂದು ಕವನ
ಮನವ ಮುದಗೊಳಿಸುವ ಚೇತನ
ಉಲಿವ ಹಕ್ಕಿಗಳ ಮಧುರ ಗಾನ
ಉಕ್ಕುವ ತೆರೆಗಳ ವೈಯಾರದ ತನನ
ದಿನದಾರಂಭಕೆ ನಿಸರ್ಗದ ಈ ತಯಾರಿ
0632ಎಎಂ23052019
*ಅಮು ಭಾವಜೀವಿ*
No comments:
Post a Comment