ನರಕವಾಯ್ತು ಬದುಕು
ಖಾಲಿ ಆಗುತಿದೆ ಜೀವಜಲ
ಬತ್ತಿ ಹೋದ ಜಲಮೂಲ
ಹಿಂದೆ ಪ್ರಕೃತಿ ಸಂಪತ್ಭರಿತವಾಗಿತ್ತು
ಕೆರೆ ಕಟ್ಟೆ ನದಿ ಹಳ್ಳ ತುಂಬಿ ಹರಿಯುತಿತ್ತು
ಬರದ ಬೇಗೆ ದೂರ ಉಳಿದಿತ್ತು
ಬದುಕು ಸುಖಮಯವಾಗಿತ್ತು
ಮನುಷ್ಯ ತನ್ನ ಆಸೆಗಳಿಗೆ
ಪ್ರಕೃತಿಯ ನಾಶಕೆ ಕೈಹಾಕಿದ
ಅವನ ವರ್ತನೆಯ ಸಹಿಸಿದ
ನಿಸರ್ಗ ಮುನಿದು ಕೂತಿದೆ ಈಗ
ಕಾಡೆಲ್ಲ ಬರಿದಾಗಿ ಹೋಯ್ತು
ಅಂತರ್ಜಲ ಪಾತಾಳ ಸೇರಿತು
ಮಳೆ ಎಂಬುದು ಮರೀಚಿಕೆಯಾಗಿ
ಬುವಿಯ ಬದುಕು ನರಕವಾಯ್ತು
ಮರವಿಲ್ಲದ ಭೂಮಿ ಮರುಗುತಿದೆ
ಮಳೆ ಬೀಳದ ನೆಲ ಬಂಜೆಯಾಗಿದೆ
ಆಧುನಿಕ ಬದುಕಿನ ಚಕ್ರವ್ಯೂಹದಲಿ
ನರಳುತಿದೆ ಬದುಕು ನೆರಳ ಕಾಣದೆ
ಬಿಸಿಲಿನ ತಾಪ ಜೀವ ತೆಗೆದಿದೆ
ಬಾಯಾರಿಕೆ ನೀಗದಾಗಿದೆ
ಹೀಗೆ ಆದರೆ ಸರ್ವನಾಶ
ಇನ್ನೆಲ್ಲಿದೆ ಬದುಕಿನ ಸಂತಸ
ಉಳಿಸಿ ಬಳಸೋಣ ಜೀವಜಲ
ಮರುಪೂರಣ ಮಾಡೋಣ ಜಲಮೂಲ
ಮುಂದಿನ ಪೀಳಿಗೆಗೆ ಬದುಕುವ
ಬಳುವಳಿಯ ಉಡುಗೊರೆ ನೀಡೋಣ
1229ಪಿಎಂ10062019
ಅಮು ಭಾವಜೀವಿ
[6/10, 8:30 PM] +91 99869 52941: ಕವಿತೆ ನೈಜತೆ ಇದೆ
[6/10, 8:51 PM] +91 90369 05195: ನೈಜತೆ ಇರುವ ಕವನ ಸುಂದರ 💐💐
*"ದಿನಾಂಕ ೧೦/೦೬/೨೦೧೯ ರ ವಿಶೇಷ ಕವನಸ್ಪರ್ಧೆಯ ತೀರ್ಪು "*
*"🥇ಅತ್ಯುತ್ತಮ ಕವನಗಳು🥇"*
೧. ಅಮುಭಾವಜೀವಿ - ನರಕವಾಯ್ತು ಬದುಕು.
೨.ಅಮರ್ ಪ್ರಿನ್ಸ್ - ಯಾರನು ದೂರಲಿ?
೩. ಮರಿಯನ್ ಡಿಸೋಜ- ಅಭಿವೃದ್ಧಿಯೆಂಬ ಅನಾಚಾರ.
*"🥈ಉತ್ತಮ ಕವನಗಳು🥈"*
೧.ಸರೋಜಾ ನಾಗರಾಜ್- ತುಂಗೆ ಕಲುಷಿತಳಾಗಿದ್ದಾಳೆಯೇ.
೨.ಲಕುಮಿಕಂದ- ಬಿರಿದ ಧರಣಿ, ಬಾರದ ವರುಣ.
೩.ಶಿವಪ್ರಸಾದ್ ಆರಾಧ್ಯ- ಸಜೀವಜಲ.
೪.ಅವಿನಾಶ್ - ಜೀವಜಲ.
*"🥉ಮನಮೆಚ್ಚಿದ ಕವನಗಳು🥉"*
೧.ಮಂಗಳದರೆ- ಜೀವಾಮೃತ.
೨.ಗಂಗಾರಾಮ್- ನಾಚಿಕೆಯೇ ಇಲ್ಲ.
💐💐 *"ಗಮನಸೆಳೆದ ಕವನಗಳು"* 💐💐
೧.ಗುರುಶಾಂತಗೌಡ- ಜೀವಜಲ ರಕ್ಷಣೆ.
೨.ಬಸವರಾಜ್ ಲಿಂಗಸಗೂರು- ಪರಿಸರ ರಕ್ಷಣೆ.
೩.ರಾಜು- ಜೀವಾಮೃತ.
೪.ಮಂಜುನಾಥ್. - ಜೀವಜಲ.
೫.ಮಹೇಶ್- ಜೀವಜಲ.
೬. ಕುಮಾರ ಚಲವಾದಿ- ಮುಂದಿನ ಜನಾಂಗಕ್ಕೆ.
ಎಲ್ಲರಿಗೂ ಅಭಿನಂದನೆಗಳು💐💐💐💐💐💐💐
*"ತೀರ್ಪುಗಾರರು:-ರಂಗನಾಥ ಕ. ನಾ ದೇವರಹಳ್ಳಿ. ಶಿಕ್ಷಕರು."*
ಆಯೋಜಕರು:- *"ಸರೋಜಾ ನಾಗರಾಜ್.. ಅಧ್ಯಕ್ಷರು ಕನ್ನಡ ಸಾಂಸ್ಕೃತಿಕ ಬಳಗ."*
ಮೇಲ್ವಿಚಾರಕರು:- *"ಹನುಮಂತೇಗೌಡ.. ಪ್ರಧಾನ ಕಾರ್ಯದರ್ಶಿ. ಕನ್ನಡ ಸಾಂಸ್ಕೃತಿಕ ಬಳಗ "*
*" ಕನ್ನಡ ಕನ್ನಡ ಎನ್ನೋಣ ಕನ್ನಡ ಸಂಸ್ಕೃತಿ ಬೆಳೆಸೋಣ "*
No comments:
Post a Comment