ಎಂಥಾ ಕಾಲ ಬಂತಯ್ಯ
ರಾಜಕೀಯ ಇದೆಂತ ನಾಟಕವಯ್ಯ
ಪಕ್ಷ ಪಕ್ಷಗಳು ಪರದಾಡುತ್ತಿವೆ
ಅಭ್ಯರ್ಥಿಗಳಿಲ್ಲದೆ ಕಂಗಾಲಾಗಿವೆ
ಕುಟುಂಬಗಳದೇ ಇಲ್ಲಿ ರಾಜಕೀಯ
ಜಾತಿ ಜಾತಿಗಳ ಲೆಕ್ಕಾಚಾರ ಅಯೋಮಯ
ತಳಮಟ್ಟದ ಕಾರ್ಯಕರ್ತರು
ಕಿತ್ತಾಡಿಕೊಂಡರು ಇಲ್ಲಿ
ನಾಯಕರ ಸಮನ್ವಯ ಮಂತ್ರ
ಅಧಿಕಾರಕ್ಕಾಗಿ ದೋಸ್ತಿ ಸೂತ್ರ
ಅವರ ಹುಳುಕನ್ನು ಇವರು
ಇವರ ಹುಳುಕನ್ನು ಅವರು
ಎತ್ತಿ ತೋರಿಸಿ ಬೀದಿ ರಂಪ
ಮಾಡಿ ಕಚ್ಚಾಡುತ್ತಿಹರು
ಎಲ್ಲರೂ ಅವರೇ ಆದರೂ
ತಾವೇ ಪ್ರಾಮಾಣಿಕರೆಂದು ಬೀಗುವರು
ಆಮಿಷಗಳ ಎಸೆದೆಸೆದು
ಮತದಾರನ ಮರಳು ಮಾಡುವರು
ಮಾತುಗಳು ಮೀರಿದರು
ನೈತಿಕತೆಯನೇ ಮರೆತರು
ಎಲ್ಲಾ ಅಧಿಕಾರಕ್ಕಾಗಿ
ಗೆದ್ದು ಲೂಟಿ ಹೊಡೆಯುವುದಕ್ಕಾಗಿ
10:21 ಪಿಎಂ 1 4 2019
ಅಮು ಭಾವಜೀವಿ
No comments:
Post a Comment